

ಖಾನಾಪುರ: ಶಾಲಾ ಜೀವನವು ವಿನೋದ ಮತ್ತು ಸಂತೋಷದ ಸಮಯ. ಗೆಳೆಯರೊಂದಿಗೆ ಒಡನಾಡಿದ ನೆನಪುಗಳ ಮೂಟೆ ಅಜರಾಮರ. ಆ ಬಾಂಧವ್ಯ ಯಾವಾಗಲೂ ಉಳಿಸಿಕೊಳ್ಳಬೇಕು ಎಂದು ಸಹ ಶಿಕ್ಷಕಿ ಪಿ.ಕೆ.ಗೋರ್ ಹೇಳಿದರು.
ತೋಪಿನಕಟ್ಟಿಯ ಮಹಾಲಕ್ಷ್ಮೀ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2006-7ನೇ ಸಾಲಿನ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಮಾತನಾಡಿದರು. ಪ್ರಾಚಾರ್ಯ ಎಂ.ಎಸ್.ಆರ್ಗು ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕ ಎಲ್.ಡಿ.ಪಾಟೀಲ, ಜಿ.ಎಂ.ಕಾಂಬಳೆ, ಎನ್.ಎಂ. ಪಾಟೀಲ, ಹಿರೇಮಠ, ಆರ್.ಎನ್.ಹೊಸೂರಕರ, ಎಸ್.ಪಿ.ಕುತ್ರೆ, ರಮೇಶ ಸುತಾರ ಇತರರಿದ್ದರು