

ವಿಜಯವಾಣಿ ಸುದ್ದಿಜಾಲ ಧಾರವಾಡ
ತಬಲಾ ಆನಂದ ಎಂದೇ ಖ್ಯಾತರಾಗಿದ್ದ ಆನಂದ ಅಂಬೇಕರ ಅವರ 11ನೇ ಸಂಸ್ಮರಣೆ ಅಂಗವಾಗಿ ನ. 17 ರಂದು ಸಂಜೆ 5.30ಕ್ಕೆ ತೇಜಸ್ವಿನಗರದಲ್ಲಿರುವ ಕೃಷ್ಣ ಅಂಬೇಕರ ಮನೆ ಆವರಣದಲ್ಲಿ ನೆನಪು ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಯುವ ಪ್ರತಿಭೆ ದೀಪ್ತಿ ಭಟ್ಟ ಪ್ರಾರ್ಥನಾ ಗೀತೆಯೊಂದಿಗೆ ಚಾಲನೆ ನೀಡಲಾಗುವುದು. ನಂತರ ತಬಲಾವಾದಕ ಪಂ. ರುನಾಥ ನಾಕೋಡ ಅವರಿಂದ ತಬಲಾ ಸೋಲೊ, ಯುವ ಗಾಯಕ ಸುಜಯೀಂದ್ರ ಕುಲಕರ್ಣಿ ಗಾನಸುಧೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಸಹ ಕಲಾವಿದರಾಗಿ ಹಾಮೋರ್ನಿಯಂ ವಾದಕ ಯಲ್ಲಾಪುರದ ಸತೀಶ ಭಟ್ಟ ಹೆಗ್ಗಾರ, ಯುವ ತಬಲಾ ವಾದಕ ಗುರುರಾಜ ಹೆಗಡೆ (ಆಡುಕೋಳ) ಪಾಲ್ಗೊಳ್ಳಲಿದ್ದಾರೆ. ನೆನಪು ಕಾರ್ಯಕ್ರಮಕ್ಕೆ ಆನಂದ ಅವರ ಸಹಪಾಠಿಗಳು, ಇತರರು ಆಗಮಿಸಲಿದ್ದಾರೆ.
ಗಾಯಕ ಪಂ. ಎಂ. ವೆಂಕಟೇಶಕುಮಾರ, ಪಂ. ರಾಚಯ್ಯ ಹಿರೇಮಠ, ಪಂ. ಶಾಂತಾರಾಮ ಹೆಗಡೆ, ಪಂ. ಮಲ್ಲಿಕಾರ್ಜುನ ತರ್ಲಘಟ್ಟ, ಪಂ. ಕೈವಲ್ಯಕುಮಾರ ಗುರವ, ಪಂ. ಜಯತೀರ್ಥ ಮೇವುಂಡಿ, ಉ. ಶಫೀಕ ಖಾನ್, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಪಂ. ಶ್ರೀನಿವಾಸ ಜೋಶಿ, ಪಂ. ಶ್ರೀಕಾಂತ ಕುಲಕರ್ಣಿ, ಇತರರು ಭಾಗವಹಿಸಲಿದ್ದಾರೆ. ಯುವ ಗಾಯಕ ಡಾ. ಹರೀಶ ಹೆಗಡೆ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿದೆ.