ನೆನಪಿನಂಗಳದಲ್ಲಿ ಹುತಾತ್ಮರ ದಿನಾಚರಣೆ

30 ckm 1 web
Published on

ಚಿಕ್ಕಮಗಳೂರು: ನಗರದ ಜಿಲ್ಲಾಧಿಕಾರಿ ಕಚೇರಿ ಉದ್ಯಾನ ಆವರಣದ ನೆನಪಿನಂಗಳದಲ್ಲಿ ಗಾಂಧೀಜಿ ಪುತ್ಥಳಿಗೆ ಗಣ್ಯರು ಹಾಗೂ ವಿದ್ಯಾರ್ಥಿಗಳು ಸೋಮವಾರ ಪುಷ್ಪಾರ್ಚನೆ ಮಾಡುವ ಮೂಲಕ ಹುತಾತ್ಮರ ದಿನಾಚರಣೆ ಆಚರಿಸಿದರು. ವಿದ್ಯಾರ್ಥಿಗಳು ರಘುಪತಿ ರಾಘವ ರಾಜಾರಾಂ, ಗಾಯಕಿ ರಮ್ಯಾ ಅವರು ಗಾಂಧೀಜಿಗೆ ಪ್ರಿಯವಾದ ಹಲವು ಭಜನೆಗಳನ್ನು ಹಾಡಿದರು. ಬೆಳಗ್ಗೆ 10.59ಕ್ಕೆ ಸೈರನ್ ಮೊಳಗಿದಾಗ ನೆರೆದಿದ್ದವರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡಿದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಡಿಸಿಎಫ್ ಎನ್.ಇ.ಕ್ರಾಂತಿ, ಪೌರಾಯುಕ್ತ ಬಿ.ಸಿ.ಬಸವರಾಜ್, ತಹಸೀಲ್ದಾರ್ ವಿನಾಯಕ್ ಸಾಗರ್, ಬಿಇಒ ಎಸ್.ಆರ್.ಮಂಜುನಾಥ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಪವಿತ್ರಾ ಮಧುಗುಂಡಿ, ಡಾ. ಸುಂದರ್ ಗೌಡ, ವಕೀಲೆ ಮಮತಾ, ಪ್ರಾಚಾರ್ಯ ಎಂ.ಎನ್.ಷಡಕ್ಷರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net