ನೆತ್ತಿಗೊಂದು ಸೂರು ಒದಗಿಸಿ

00000
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನೆತ್ತಿಕೊಂದು ಸೂರಿಗಾಗಿ ಆಗ್ರಹಿಸಿ ಕಸಬಾ ಹೋಬಳಿಯ ಕಣ್ಣೂರಹಳ್ಳಿಯಿಂದ ತಾಲೂಕು ಕಚೇರಿವರೆಗೆ ಕರ್ನಾಟಕ ಬಿಡುಗಡೆ ಚಿರತೆಗಳು ಜನಪರ ಮಹಾಸಂಘದಿಂದ ಸೋಮವಾರ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಸಂಘಟನೆ ಅಧ್ಯಕ್ಷ ಶಿವರಾಜ್ ನೇತೃತ್ವದಲ್ಲಿ ಸಾವಿರರು ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಣ್ಣೂರಹಳ್ಳಿಯ ಸ.ನಂ 12 ಮತ್ತು 37ರಲ್ಲಿ 50 ಎಕರೆಗೂ ಹೆಚ್ಚು ಗೋಮಾಳ ಜಮೀನನ್ನ ಸ್ಥಳೀಯ ದಲಿತರ ಹೆಸರಿನಲ್ಲಿ ಹಾಗೂ ಗ್ರಾಮದ ಸಣ್ಣ ಮಕ್ಕಳು ಅಂದರೆ ಮೂರು ವರ್ಷ ದಿಂದ 12 ವರ್ಷದ ಮಕ್ಕಳ ಹೆಸರಿನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಆಂಧ್ರ ಮೂಲದ ಸುಧಾಕರ್ ರೆಡ್ಡಿ, ಮಮತಾ ರೆಡ್ಡಿ, ಮಸ್ತಾನ್ ರೆಡ್ಡಿ, ಸುನಿಲ್ ರೆಡ್ಡಿ ಮುಂತಾದ ಭೂಮಾಫಿಯಾದವರು ಪರಭಾರೆ ಮಾಡಿಕೊಂಡಿರುತ್ತಾರೆ. ಇದರಿಂದ ಸರ್ಕಾರದ ನೂರಾರು ಕೋಟಿ ಬೆಲೆಬಾಳುವ ಜಮೀನನ್ನು ಕಂಬಳಿಸಿದಂತಾಗಿದೆ ಎಂದು ಸಂಘಟನೆ ಅಧ್ಯಕ್ಷ ಶಿವರಾಜ್ ಆಪಾದಿಸಿದರು.


ಗೋಮಾಳ ಜಮೀನನ್ನ ಸ್ಥಳೀಯ ದಲಿತರ ಹೆಸರಿನಲ್ಲಿ ಅಕ್ರಮವಾಗಿ ನುಂಗಿರುವ ಅಧಿಕಾರಿಗಳು ಮತ್ತು ಭೂಮಾಫಿಯಾದವರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆ ಅನ್ವಯ ದೂರು ದಾಖಲಿಸಿ ಬಂಧಿಸಬೇಕು. ಆ ಜಮೀನನ್ನು ವಶಪಡಿಸಿಕೊಂಡು ಬಡವರಿಗೆ ನಿವೇಶನ ನೀಡಬೇಕು. ಕಣ್ಣೂರಹಳ್ಳಿಯ ಸರ್ವೇ ನಂಬರ್ 177 ಮತ್ತು178ರ ಸರ್ಕಾರಿ ಜಮೀನನ್ನು ಬುದ್ದ ವಿಹಾರಕ್ಕೆ ಹಾಗೂ ಅಂಬೇಡ್ಕರ್ ಅವರ ಪುತ್ಥಳಿಗೆ ಮಂಜೂರು ಮಾಡಬೇಕು. ಸರ್ವೇ ನಂಬರ್ 12ರಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕು ಪತ್ರ ವಿದ್ಯುತ್ ರಸ್ತೆ ಚರಂಡಿ ಶೌಚಗೃಹಗಳನ್ನು ನಿರ್ಮಿಸಿ ಕೊಡಬೇಕು. ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಎರಡು ಎಕರೆ 10ಗುಂಟೆ ಜಾಗ ಮಂಜೂರಾಗಿದ್ದು, ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಹಾಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಹಾಗೂ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net