ನೆಟೆ ರೋಗ, ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

PH 06
Published on

ಜೇವರ್ಗಿ: ಕಳೆದ ಸಾಲಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಸಂಪೂರ್ಣ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಆರೋಪಿಸಿದರು.

ಸೋಮವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ನೆಟೆ ರೋಗ ಫಲಾನುಭವಿ ರೈತರಿಗೆ ಶೀಘ್ರ ಪರಿಹಾರ ನೀಡಬೇಕು. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ತಮ್ಮ ಮೇಲೆ ಇಟ್ಟಿರುವ ಭರವಸೆಗೆ ಯಾವತ್ತು ಚುತಿ ಬಾರದಂತೆ ನಡೆದುಕೊಳ್ಳುತ್ತೆನೆ. ಈಗಾಗಲೆ ತಮ್ಮನ್ನು ಜಾತ್ಯಾತೀತ ಜನತಾದಳದ ರಾಜ್ಯ ಕೋರ ಕಮಿಟಿ ಸದಸ್ಯರಾಗಿ ನೇಮಕ ಮಾಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ಪಕ್ಷದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಪಕ್ಷದ ರಾಜ್ಯ ಕೋರ ಕಮಿಟಿ ಸದಸ್ಯರಾಗಿರುವುದಕ್ಕೆ ಕಾರ್ಯಕರ್ತರು ಹಾಗೂ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಸಿದ್ದಣ್ಣಗೌಡ ಬಿರೆದಾರ, ಧರ್ಮರಾಜ ಜೊಗೂರ, ಸಿದ್ದಯ್ಯಸ್ವಾಮಿ ಗದಗಿಮಠ, ಶಂಕರರಾವ್ ಕುಲಕರ್ಣಿ, ಪ್ರೇಮನಗೌಡ ಮಾಲಿಪಾಟೀಲ್, ದೇವಿಂದ್ರ, ದುಂಡಪ್ಪ ನಾಯ್ಕೋಡಿ, ದವಲಸಾಬ ಮುಲ್ಲಾ, ಮಹಿಬೂಬ ಗೊಬ್ಬರವಾಡಗಿ, ಶಿವಕುಮಾರ ಅಂಗಡಿ, ಶರಣಗೌಡ ಬಿರೆದಾರ, ರಾಘವೇಂದ್ರ ಕುಲಕರ್ಣಿ, ಮಹಾಂತಗೌಡ ಪಾಟೀಲ್ ನಂದಿಹಳ್ಳಿ, ಸಂಗನಗೌಡ ಪಾಟೀಲ್ ನಂದಿಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net