ನೆಗೆಟಿವ್ ಬಂದವರಿಗೆ ಮಾತ್ರ ಪ್ರವೇಶ

17CBP6
Published on

ಚಿಕ್ಕಬಳ್ಳಾಪುರ : ಪದವಿ ಕಾಲೇಜು ಕಾರ್ಯಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದರೂ ತರಗತಿಗೆ ಹಾಜರಾಗಲು ಕರೊನಾ ಪರೀಕ್ಷಾ ವರದಿಯ ಫಲಿತಾಂಶ ಎದುರು ನೋಡುವಂತಾಗಿದೆ.

ಹೌದು! ಈಗಾಗಲೇ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಬಹುತೇಕರ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬಂದಿಲ್ಲ. ಇದರಲ್ಲಿ ನೆಗೆಟಿವ್ ಬಂದವರಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಜತೆಗೆ ಪಾಲಕರ ಒಪ್ಪಿಗೆ ಪತ್ರ ಇರಬೇಕು.ಅಧಿಕೃತವಾಗಿ ಮಂಗಳವಾರ ಪದವಿ ಕಾಲೇಜುಗಳು ಕಾರ್ಯಾರಂಭಿಸಿವೆ. ಆದರೆ, ಮೊದಲ ದಿನ ಬೆರಳೆಣಿಕೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು. ಇದರ ನಡುವೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನಿಯಮ ಪಾಲನೆ, ತರಗತಿಗಳ ನಿರ್ವಹಣೆ, ಅಧ್ಯಯನದ ಬಗ್ಗೆ ಮಾರ್ಗದರ್ಶನ ನೀಡಿದರು.

ಈಗಾಗಲೇ ಕಾಲೇಜುಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಸೋಂಕಿನ ತಪಾಸಣೆಯ ಪತ್ತೆ ಪರೀಕ್ಷೆಯು ಬಿರುಸಿನಿಂದ ನಡೆಯುತ್ತಿದೆ. ನೆಗೆಟಿವ್ ಬಂದವರು ತರಗತಿಯಲ್ಲಿ ಹಾಜರಾಗಲಿದ್ದು ಒಂದೆರಡು ದಿನದಲ್ಲಿ ಸಹಜ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಮಾತು ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net