ನೃಪತುಂಗ ಕನ್ನಡ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

25
Published on

ಮೈಸೂರು: ನೃಪತುಂಗ ಕನ್ನಡ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸವಿತಾ ಪ.ಮಲ್ಲೇಶ್ ಅವರು ಮಣಿಪುರದ ಜನ ಅನುಭವಿಸುತ್ತಿರುವ ಹಿಂಸಾಚಾರ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಅಮಾನವೀಯ ಕೃತ್ಯವಾದ ಬೆತ್ತಲೆ ಪ್ರದರ್ಶನವನ್ನು ಖಂಡಿಸಿದರು.


ಮೈಸೂರಿನಲ್ಲಿ ಶಾಂತಿ ನೆಲೆಸಿರಲು ನಮ್ಮಲ್ಲಿರುವ ಒಗ್ಗಟ್ಟು, ಕೋಮು ಗಲಭೆಗಳಿಗೆ ಬೆಂಬಲಿಸದೆ ಹೊಂದಾಣಿಕೆಯಿಂದ ಬಾಳುತ್ತಿರುವುದೇ ಕಾರಣ. ಅದೇ ರೀತಿ ಭಾರತದಲ್ಲಿ ನಾವೆಲ್ಲರೂ ಜಾತಿ, ಮತ, ಧರ್ಮ ಎಂಬ ಭೇದಭಾವ ತೊಡೆದು ಹಾಕಿ ನಾವೆಲ್ಲ ಭಾರತೀಯರು ಎಂಬ ಭಾವ ಬೆಳೆಸಿಕೊಳ್ಳಬೇಕು ಎಂದರು.


ಅಕ್ಕ-ತಂಗಿಯರು, ಹೆಣ್ಣು ಮಕ್ಕಳನ್ನು ಹೇಗೆ ಗೌರವ, ಪ್ರೀತಿಯಿಂದ ಕಾಣಬೇಕು ಎಂದು ಮಕ್ಕಳಿಗೆ ಪಾಲಕರು ತಿಳಿಸಿಕೊಡಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಸ.ರ.ಸುದರ್ಶನ, ಮುಖ್ಯಶಿಕ್ಷಕರಾದ ಸೌಮ್ಯಶ್ರೀ, ಶೀಲಾ, ಕಾಲೇಜಿನ ಪ್ರಾಂಶುಪಾಲೆ ಮಮತಾ, ಎಸ್‌ಡಿಎಂಸಿ ಅಧ್ಯಕ್ಷ ಭರತ್ ಕುಮಾರ್ ಉಪಸ್ಥಿತರಿದ್ದರು.


ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಆರ್ಯ ಈಡಿಗರ ಸಂಘ ವತಿಯಿಂದ ವಿಜಯನಗರ 3ನೆಯ ಹಂತದ ನೂತನ ವಿದ್ಯಾರ್ಥಿನಿಲಯ ಕಟ್ಟಡದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.


ಅಧ್ಯಕ್ಷ ಡಾ.ಎಂ.ಕೆ.ಪೋತರಾಜ್, ಉಪಾಧ್ಯಕ್ಷ ರಾಜಶೇಖರ ಕದಂಬ, ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ಶ್ರೀಕಾಂತ್ ವೀರರಾಜ್, ಎಚ್.ಟಿ.ಗೋವಿಂದರಾಜು, ವಿದ್ಯಾಸಾಗರ್, ಸಿದ್ದಪ್ಪ, ಅಣ್ಣಪ್ಪ ಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net