ನೃತ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

24..npk .3
Published on

ನಾಪೋಕ್ಲು: ಭಾಗಮಂಡಲದ ಜಾನ್ ಡಾನ್ಸ್ ಗ್ಯಾಲರಿ ನೃತ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ನವೆಂಬರ್‌ನಲ್ಲಿ ಪಾಂಡಿಚೇರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಸಂಸ್ಥೆಯ ಗಾನವಿ, ಧೃತಿ, ತ್ರೈಸಿ, ಅನುಪಮಾ, ನೀಕ್ಷಾ, ಜಿ.ಸಾನ್ವಿ, ದರ್ಶಿನಿ, ಯುಕ್ತಾ, ಹರ್ಷಿಕಾ, ಪವಿತ್ರಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಾಗಮಂಡಲದ ನೃತ್ಯ ತರಬೇತಿ ಸಂಸ್ಥೆ ಹಾಗೂ ಕರಾಟೆ ತರಬೇತಿಯ ನಿರ್ದೇಶಕ ನಾಗರಾಜ್, ನೃತ್ಯ ತರಬೇತಿಯ ಮುಖ್ಯ ತರಬೇತುದಾರರಾಗಿ ಅಂತಾರಾಷ್ಟ್ರೀಯ ನೃತ್ಯಪಟು ಪೃಥ್ವಿ ನಾಯಕ್ ಹಾಗೂ ಸಹ ತರಬೇತುದಾರರಾಗಿ ಬೃಂದಾಕವನ್, ಕರಾಟೆ ತರಬೇತುದಾರರಾಗಿ ರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ರೆಫ್ರಿ ಇಮ್ಯಾನ್ವಲ್ ಹಾಗೂ ರಾಯ್ ಜೋಸೆಫ್ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net