ನೂಲಿ ಚಂದಯ್ಯ ಜಯಂತಿ 21ರಂದು

Nooli
Published on

ಕಲಬುರಗಿ: ಜಿಲ್ಲಾಡಳಿತದ ವತಿಯಿಂದ ಆಗಸ್ಟ್ ೩೧ರಂದು ಮಧ್ಯಾಹ್ನ ೨ಕ್ಕೆ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ನೂಲಿಯ ಚಂದಯ್ಯ ಜಯಂತಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಅಧಿಕಾರಿಗಳು ತಮಗೆ ನೀಡಿದ ಕೆಲಸ ಕಟ್ಟುನಿಟ್ಟಾಗಿ ಪಾಲಿಸಬೇಕು. ವೇದಿಕೆ ಸಮಿತಿಗೆ ಒಬ್ಬ ಅಧ್ಯಕ್ಷ ಹಾಗೂ ಉಪನ್ಯಾಸಕರನ್ನು ನೇಮಕ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್ ಮಾತನಾಡಿ, ಸಂಗೀತ ಕಾರ್ಯಕ್ರಮ ಜರುಗಲಿವೆ. ವೇದಿಕೆ ಅಲಂಕಾರ, ಆಮಂತ್ರಣ ಪತ್ರ ಮುದ್ರಿಸಲಾಗುವುದು ಎಂದು ತಿಳಿಸಿದರು.
ನಿಗದಿತ ದಿನದಂದು ಕಡ್ಡಾಯವಾಗಿ ಸರ್ಕಾರಿ, ಅರೆ-ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ತಾಲೂಕು ಕಚೇರಿಗಳಲ್ಲಿ ಬೆಳಗ್ಗೆ ೯ಕ್ಕೆ ಜಯಂತಿ ಆಚರಿಸಬೇಕು. ಕುಡಿಯುವ ನೀರು, ಸ್ವಚ್ಪತೆ ಕಾಪಾಡಿಕೊಂಡು ಹೋಗಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಮುಖಂಡರುಗಳು ಸಲಹೆ, ಸೂಚನೆ ನೀಡಿದರು.
ಸಮಾಜದ ಮುಖಂಡರಾದ ನೂಲಿಯ ಸಮಾಜದ ಅಧ್ಯಕ್ಷ ಶರಣು ಭಜಂತ್ರಿ ಗೌರವ ಅಧ್ಯಕ್ಷ ಲಕ್ಷö್ಮಣ ಅಳ್ಳೊಳ್ಳಿ, ಚಂದಯ್ಯ ಹೊನ್ನಳಿ, ಉಪಾಧ್ಯಕ್ಷ ಮಂಜುಳಾ ಭಜಂತ್ರಿ, ರಾಜು ಭಜಂತ್ರಿ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net