ನೂರಾರು ಮನೆಗಳಿಗೆ ನುಗ್ಗಿದ ನೀರು

1809 MLK 01
Published on

ಸೇಡಂ: ಶುಕ್ರವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ಇಡೀ ತಾಲೂಕು ತತ್ತರಿಸಿದೆ. ಪಟ್ಟಣದ ಸೇರಿ ವಿವಿಧ ಹಳ್ಳಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಬೆಳಗ್ಗೆ 5ಗಂಟೆಯಿಂದ ಆರಂಭವಾದ ಮಳೆ ಮಧ್ಯಾಹ್ನ 2ಗಂಟೆ ವರೆಗೂ ಸುರಿಯಿತು. ಇದರಿಂದ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದ್ದು, ದವಸ- ಧಾನ್ಯ ಹಾಗೂ ಬಟ್ಟೆ ಸೇರಿ ಇನ್ನಿತರ ಸಾಮಗ್ರಿಗಳು ಜಲಾರ್ಪಣೆಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಸಹಾಯಕ ಆಯುಕ್ತ ರಮೇಶ ಕೋಲಾರ ಅವರು ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಶಾಸಕ ತೆಲ್ಕೂರ, ಪಟ್ಟಣದ ಗೋಧಾಮ ಏರಿಯಾ, ದೊಡ್ಡ ಅಗಸಿ, ಸಣ್ಣ ಅಗಸಿ, ಇಂದಿರಾ ನಗರ, ಬಸವನಗರ, ಜನತಾ ಕಾಲನಿ, ಛೋಟಿ ಗಿರಣಿ, ತಾಲೂಕಿನ ಬಟಗೇರಾದಲ್ಲಿನ ಕಮಲಾವತಿ ನದಿ ಸಮೀಪದ ಮನೆಗಳು ಜಲಾವೃತವಾಗಿವೆ. ಹಾನಿ ಬಗ್ಗೆ ಸಂಪೂರ್ಣ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿ, ತಹಸೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ಊಟ, ವಸತಿಯಿಲ್ಲದೆ ತೊಂದರೆ ಅನುಭವಿಸುತ್ತಿರುವವರಿಗಾಗಿ ಪಟ್ಟಣದಲ್ಲಿ 3 ಕೇಂದ್ರಗಳನ್ನು ಆರಂಭಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದರು.
ಸಹಾಯಕ ಆಯುಕ್ತರು, ತಾಲೂಕು ಪಂಚಾಯಿತಿ ಕಚೇರಿ, ಪೊಲೀಸ್ ಠಾಣೆ ಸೇರಿ ಅನೇಕ ಸಕರ್ಾರಿ ಕಟ್ಟಡಗಳು ಸಂಪೂರ್ಣ ಜಾಲಾವೃತಗೊಂಡಿದ್ದವು. ಕಚೇರಿಯಲ್ಲಿನ ನೀರು ಖಾಲಿ ಮಾಡುವಲ್ಲಿ ಸಿಬ್ಬಂದಿ ಹೈರಾಣಾದರು. ಅನೇಕ ರಸ್ತೆಗಳು ನೀರಿನಿಂದ ತುಂಬಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಸಿಪಿಐ ರಾಜಶೇಖರ ಹಳಗೋಧಿ, ಪಿಎಸ್ಐ ಬಿ.ಸುಶೀಲಕುಮಾರ, ಉಪ ತಹಸೀಲ್ದಾರ್ ನಾಗನಾಥ ತರಗೆ, ಬಿಜೆಪಿ ನಗರಾಧ್ಯಕ್ಷ ಅನೀಲ ಐನಾಪುರ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ವಿಜಯಕುಮಾರ ಶರ್ಮಾ , ಪುರಸಭೆ ಸದಸ್ಯ ಶಿವಾನಂದಸ್ವಾಮಿ, ಪ್ರಮುಖರಾದ ಅಶೋಕ ಪವಾರ, ಲಾಲು ರಾಠೋಡ್, ಅನೀಲ ರನ್ನೇಟ್ಲಾ, ವೆಂಕಟೇಶ ಪಾಟೀಲ್(ವೆಂಕಿ), ರಾಮು ಕಣೇಕಲ್, ಕಿಶನ ಪವಾರ, ಆಶಾ ಜಾಧವ್, ರಾಘವೇಂದ್ರ ಮೆಕಾನಿಕ್, ಸೂಗಪ್ಪ ಬಳಗಾರ, ಶ್ರೀಮಂತ ಅವಂಟಿ ಇದ್ದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನೆ ಮಾಡಿದ್ದೇನೆ. ಜನರು ಸಂಕಷ್ಟದಲ್ಲಿದ್ದು, ಅವಶ್ಯಕತೆ ಇದ್ದಲ್ಲಿ ಗಂಜಿ ಕೇಂದ್ರ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಹಾನಿ ಬಗ್ಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ಕೊಡಲು ಹೇಳಿದ್ದು, ಸಕರ್ಾರದೊಂದಿಗೆ ಚಚರ್ಿಸಿ ಸಂತ್ರಸ್ತರಿಗೆ ನೆರವು ನೀಡಲಾಗುವುದು.
| ರಾಜಕುಮಾರ ಪಾಟೀಲ್ ತೆಲ್ಕೂರ, ಶಾಸಕ


ಮಳೆಯಿಂದ ಹಾನಿಗೊಳಗಾದ ಕುರಿತು ತಾಲೂಕಿನಾದ್ಯಂತ ಸಂಚರಿಸಿ ಪರಿಸ್ಥಿತಿ ಅವಲೋಕನ ಮಾಡಲಾಗುತ್ತಿದೆ. ಮಳೆಯಿಂದಾಗಿ 36 ಕುಸಿದಿದ್ದು, 799 ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.
| ಬಸವರಾಜ ಬೆಣ್ಣೆಸಿರೂರ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net