ನೂರರಷ್ಟು ಲಿತಾಂಶ ಸಾಧಿಸಲು ವಾಗ್ದಾನ!

8BTG1A
Published on

ಬೆಟಗೇರಿ: ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ನೂರಕ್ಕೆ ನೂರರಷ್ಟು ಲಿತಾಂಶ ಮಾಡಲು ಶ್ರಮಿಸುತ್ತೇವೆ ಎಂದು ಗ್ರಾಮದ ವಿವಿಡಿ ಪ್ರೌಢಶಾಲೆ ಶಿಕ್ಷಕರು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ವಾಗ್ದಾನ ಮಾಡಿದರು.

ವಿದ್ಯಾರ್ಥಿಗಳು ಶೇ.75, ಶೇ.80, ಶೇ.90, ಶೇ.95, ಶೇ.100 ಲಿತಾಂಶ ಸಾಧಿಸುವುದಾಗಿ ಭರವಸೆ ನೀಡಿದರು. ನೋಟಿಸ್​ ಲಕದ ಮೇಲೆ ವಿದ್ಯಾರ್ಥಿಗಳು ಭಾವಚಿತ್ರ ಅಂಟಿಸಿ, ವಿದ್ಯಾರ್ಥಿಗಳು ಎಷ್ಟು ಲಿತಾಂಶ ದಾಖಲು ಮಾಡುತ್ತಾರೆ ಎಂಬ ವಿವರಗಳನ್ನು ನೀಡಿದ್ದಾರೆ. ಲಿತಾಂಶ ಹೆಚ್ಚಿಸಲು ವಿಶೇಷ ಪಾಠ, ನುರಿತ ಶಿಕ್ಷಕರಿಂದ ಉಪನ್ಯಾಸ, ಸಹಪಠ್ಯ ಚಟುವಟಿಕೆ ತರಬೇತಿ ನೀಡಲು ಮುಂದಾಗಿದ್ದಾರೆ. ಇದಷ್ಟೇ ಅಲ್ಲದೇ ಗುಂಪು ರಚನೆ ಮಾಡಿ ಪರೀಾ ತಯಾರಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷ 292 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀೆ ಬರೆಯಲಿದ್ದಾರೆ. ಪರೀೆ ಅರಿವು, ಭಯಮುಕ್ತ ವಾತಾವರಣ ನಿರ್ಮಾಣ, ಪರೀೆ ಬರೆಯುವ ವಿಧಾನ ತಿಳಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಮಾಹಿತಿ ನೀಡಿದ್ದಾರೆ.

ಚಿಕ್ಕೋಡಿ ಉಪನಿದೇರ್ಶಕ ಕಚೇರಿ ವಿಷಯ ಪರಿವೀಕ ಅರಿಹಂತ ಬಿರಾದಾರ ಪಾಟೀಲ, ಶುಭಾ ಬಿ., ಈರಣ್ಣ ಪಟಗುಂದಿ, ರಾಕೇಶ ನಡೋಣಿ, ಯಮನಪ್ಪ ವಗ್ಗರ, ಪ್ರಕಾಶ ಕುರಬೇಟ, ಗಣಪತಿ ಭಾಗೋಜಿ, ಈಶ್ವರ ಮುನವಳ್ಳಿ, ಭಾಗ್ಯಶ್ರೀ ನಾಯಕ, ಅತಿಥಿ ಶಿಕರು, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net