

ಬಣಕಲ್: ಪಲ್ಗುಣಿ ಶ್ರೀ ಕಲಾನಾಥೇಶ್ವರ ದೇವಸ್ಥಾನಕ್ಕೆ ಅರ್ಪಣೆ ಆಗಲಿರುವ ಶ್ರೀ ಬ್ರಹ್ಮರಥ ಮಂಗಳವಾರ ಮುಂಜಾನೆ ಉಡುಪಿ ಜಿಲ್ಲೆ ಕೋಟೇಶ್ವರದ ಕುಂಬಾಶಿಯಿಂದ ಹೊರಟು ಸಂಜೆ 5 ಗಂಟೆಗೆ ಕೊಟ್ಟಿಗೆಹಾರ ತಲುಪಿತು.
ಬ್ರಹ್ಮರಥವನ್ನು ಕೊಟ್ಟಿಗೆಹಾರದಿಂದ ಪಲ್ಗುಣಿವರೆಗೆ ಮೆರವಣಿಗೆಯಲ್ಲಿ ತಂದು ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಸಬ್ಬೆನಹಳ್ಳಿ ಸುಧೀರ್ ಗೌಡ, ಸಮಿತಿ ಸದಸ್ಯರು, ಗ್ರಾಮಸ್ಥರು, ದೇವಸ್ಥಾನಕ್ಕೆ ಸಂಬಂಧಪಟ್ಟ ಅಕ್ಕಪಕ್ಕದ ಗ್ರಾಮಸ್ಥರು, ಕೊಟ್ಟಿಗೆಹಾರದ ಗ್ರಾಮಸ್ಥರು, ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಬ್ರಹ್ಮರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.