ನೂತನ ಜಿಲ್ಲಾಧ್ಯಕ್ಷರಾಗಿ ಮೋಸಂಬಿ ನೇಮಕ

CHANNAPPAGOUDA MOSAMBI
Published on


ಯಾದಗಿರಿ: ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾದ ಬೆನ್ನಲ್ಲೆ ವಿವಿಧ ರಾಜಕೀಯ ಪಕ್ಷಗಳು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುತ್ತಿದ್ದು, ಇಲ್ಲಿನ ಜಿಲ್ಲಾ ಜೆಡಿಎಸ್ ಘಟಕದ ನೂತನ ಅಧ್ಯಕ್ಷರನ್ನಾಗಿ ಪಕ್ಷದ ಹಿರಿಯ ಮುಖಂಡ ಚನ್ನಪ್ಪಗೌಡ ಮೋಸಂಬಿ ಅವರನ್ನು ನೇಮಕ ಮಾಡಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಆದೇಶಿಸಿದ್ದಾರೆ.

ಪಕ್ಷ ನಿಷ್ಠೆಯ ಜತೆಗೆ ಕಂದಕೂರು ಕುಟುಂಬಕ್ಕೆ ಆಪ್ತರಾಗಿರುವ ಚನ್ನಪ್ಪಗೌಡಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ ಒಲಿದು ಬಂದಿದೆ. 3 ಬಾರಿ ಯಾದಗಿರಿ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು, ಪಕ್ಷದ ಹಿರಿಯ ರಾಜಕಾರಣಿಯಾಗಿದ್ದ ದಿ.ಸದಾಶಿವರೆಡ್ಡಿ ಕಂದಕೂರು, ಶಾಸಕ ನಾಗನಗೌಡ ಕಂದಕೂರು, ಹಾಗೂ ಗುರುಮಠಕಲ್ ಕ್ಷೇತ್ರದ ನಿಯೋಜಿತ ಜೆಡಿಎಸ್ ಅಭ್ಯಥರ್ಿ ಶರಣಗೌಡ ಕಂದಕೂರು ಜತೆ ಉತ್ತಮ ಒಡನಾಟ ಹೊಂದಿದ್ದಾರೆ.

ಶಾಸಕ ನಾಗನಗೌಡ ಕಂದಕೂರ ಶಿಫಾರಸ್ಸಿನ ಮೇರೆಗೆ, ಜಿಲ್ಲಾ ಕಾಯರ್ಾಧ್ಯಕ್ಷರಾಗಿ ಉಸ್ತಾದ್ ಶೇಖ್ ವಜಾಹತ್ ಹುಸೇನ್ ಸುರಪೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ನಾಗರತ್ನ ಮೂತರ್ಿ ಅನಪೂರ, ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷರಾಗಿ ಶಾಂತಪ್ಪ ಜಾಧವ್ ಯಂಪಾಡ ತಾಂಡ, ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷರಾಗಿ ಹಣಮಂತ ನಾಯಕ ಖಾನಳ್ಳಿ, ಹಿಂದುಳಿದ ವರ್ಗ ಘಟಕದ ಜಿಲ್ಲಾಧ್ಯಕ್ಷರಾಗಿ ಸುದರ್ಶನ ಪಾಟೀಲ ಜೈಗ್ರಾಂ,

ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಮಹ್ಮದ್ ಅನ್ಸರುದ್ದೀನ್ ಯಾದಗಿರಿ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಮೈಲಾರಪ್ಪ ಜಾಗಿರದಾರ್ ಯಾದಗಿರಿ, ಜಿಲ್ಲಾ ಯುವ ಜನತಾದಳ ಕಾಯರ್ಾಧ್ಯಕ್ಷ ಈಶ್ವರ ನಾಯಕ ಚಿಂತನಳ್ಳಿರನ್ನು ಅಧ್ಯಕ್ಷ ಇಬ್ರಾಹಿಂ ನೇಮಕಗೊಳಿಸಿ ಆದೇಶಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net