ನೂತನ ಎಸ್‌ಪಿ ಬಂಡಾರು ಅಧಿಕಾರ ಸ್ವೀಕಾರ

CTD NEW SP--006
Published on

ಚಿತ್ರದುರ್ಗ: ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ರಂಜಿತ್‌ಕುಮಾರ್ ಬಂಡಾರು ಅವರು ಭಾನುವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಅವರು,ಅಧಿಕಾರ ಹಸ್ತಾಂತರಿಸಿದರು. 2017ಕರ್ನಾಟಕ ಕೇಡರ್ ಐಪಿಎಸ್‌ಅಧಿಕಾರಿ ರಂಜಿ ತ್‌ಕುಮಾರ್ ಅವರು,ಎಸಿಪಿಯಾಗಿ ಮಂಗಳೂರಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು.
ಇಂಟರ್‌ನಲ್ ಸೆಕ್ಯೂರಿಟಿ ಎಸಿಟಿ ಹಾಗೂ ಬಳ್ಳಾರಿ ಎಸ್‌ಪಿಯಾಗಿಯೂ ಅವರು ಕಾರ‌್ಯನಿರ್ವಹಿಸಿರುವ,ಇಂಜಿನಿಯರಿಂಗ್ ಪದವೀಧ ರ ರಂಜಿತ್‌ಕುಮಾರ್ ತೆಲಂಗಾಣದ ವಾರಂಗಲ್‌ನವರು. ಧರ್ಮೇಂದ್ರಕುಮಾರ್‌ಮೀನಾ ಅವರು ಹೊಸದಿಲ್ಲಿಯ ಕೇಂದ್ರ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಹುದ್ದೆಗೆ ವರ್ಗವಾಗಿದ್ದಾರೆ. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಎಎಸ್‌ಪಿ ಎಸ್.ಜೆ.ಕುಮಾರ ಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ್ ಮತ್ತಿತರ ಪೊಲೀಸ್ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net