ನೂತನ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

19 ckm 2
ಚಿಕ್ಕಮಗಳೂರು ತಾಲೂಕು ಅರಳುಗುಪ್ಪೆ ಕೈಮರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಕೆ. ರಾಘವೇಂದ್ರ, ಉಪಾಧ್ಯಕ್ಷರಾಗಿ ಎಂ. ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರನ್ನು ಸಹ ಸದಸ್ಯರು ಅಭಿನಂದಿಸಿದರು. ಎಚ್.ಟಿ. ಚಂದ್ರೇಗೌಡ, ಎಚ್.ಎಸ್.ಈಶ್ವರೇಗೌಡ, ಶಿವಕುಮಾರ್, ಎಂ.ಬಿ.ಸತೀಶ್, ಎ.ಎನ್ ಪುಷ್ಪ ನಾಗರಾಜ್, ಗಾಯಿತ್ರಿ ಧುವೀಶ್, ಸಿ.ಜಿ.ಲೀಲಾ, ನಿರ್ವಾಣಯ್ಯ, ಹರೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಅರಳುಗುಪ್ಪೆ ಕೈಮರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಕೆ. ರಾಘವೇಂದ್ರ, ಉಪಾಧ್ಯಕ್ಷರಾಗಿ ಎಂ. ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಆಯಾ ಹುದ್ದೆಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧೀಕ್ಷಕ ಕೆ.ವಿ. ಕಲ್ಲೇಶಪ್ಪ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಗಿರೀಶ್ ಘೋಷಿಸಿದರು.

ನಂತರ ನೂತನ ಅಧ್ಯಕ್ಷ ಟಿ.ಕೆ. ರಾಘವೇಂದ್ರ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಈ ಸೊಸೈಟಿಯನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ. ಈಗಾಗಲೇ ೫.೨೦ ಕೋಟಿ ಸಾಲ ವಿತರಿಸಿz್ದೆÃವೆ ಎಂದು ಹೇಳಿದರು.

ಸೊಸೈಟಿಗೆ ನಿವೇಶನ ದಾನ ನೀಡಿದವರಿಗೆ ಹಾಗೂ ಅಭಿವೃದ್ಧಿಗೆ ಸಹಕರಿಸಿದ ಸರ್ವ ಸದಸ್ಯರಿಗೂ ಅಭಿನಂದಿಸಿ ಡಿಸಿಸಿ ಬ್ಯಾಂಕಿನಿAದ ವಿಶೇಷ ಅನುದಾನ ನೀಡುವಂತೆ ಮನವಿ ಸಲ್ಲಿಸಿ ನಿರೀಕ್ಷೆಯಲ್ಲಿz್ದÉÃವೆ. ಅನುದಾನ ಬಂದ ಬಳಿಕ ಈ ಸೊಸೈಟಿಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಎಂ. ಕೃಷ್ಣಪ್ಪ ಮಾತನಾಡಿ, ಸರ್ವ ಸದಸ್ಯರ ಸಹಕಾರದೊಂದಿಗೆ ಇಂದು ಅಧ್ಯಕ್ಷರು-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿz್ದÉÃವೆ. ಎಲ್ಲರ ವಿಶ್ವಾಸವನ್ನು ಪಡೆದು ಡಿಸಿಸಿ ಬ್ಯಾಂಕ್ ಮೂಲಕ ಸರ್ಕಾರದ ಅನುದಾನ ಪಡೆದು ಅಭಿವೃದ್ಧಿಪಡಿಸಲು ಗುರಿ ಹೊಂದಿz್ದÉÃವೆ ಎಂದರು.

ಮಾಜಿ ಅಧ್ಯಕ್ಷ ಟಿ.ಎಸ್. ಶಿವೇಗೌಡ ಮಾತನಾಡಿ, ಸರ್ವ ಸದಸ್ಯರ ವಿಶ್ವಾಸ ಪಡೆದು ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿರುವ ಟಿ.ಕೆ. ರಾಘವೇಂದ್ರ ಮತ್ತು ಕೃಷ್ಣಪ್ಪ ಇವರನ್ನು ಅಭಿನಂದಿಸಿ ತಮ್ಮ ಅಧಿಕಾರವಧಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸೊಸೈಟಿ ಹೊಂದಲಿ, ರೈತರಿಗೆ ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಾಲಸೌಲಭ್ಯ ನೀಡುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಎಚ್.ಟಿ. ಚಂದ್ರೇಗೌಡ, ಎಚ್.ಎಸ್.ಈಶ್ವರೇಗೌಡ, ಶಿವಕುಮಾರ್, ಎಂ.ಬಿ.ಸತೀಶ್, ಎ.ಎನ್ ಪುಷ್ಪ ನಾಗರಾಜ್, ಗಾಯಿತ್ರಿ ಧುವೀಶ್, ಸಿ.ಜಿ.ಲೀಲಾ, ನಿರ್ವಾಣಯ್ಯ, ಹರೀಶ್, ಕೆ.ಕೆ.ಮನುಕುಮಾರ್, ದೀಪಕ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೆ.ಆರ್. ರಘು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net