ನೂತನ ಅಧ್ಯಕ್ಷರಾಗಿ ಪೃಥ್ವಿ ಜಯರಾಮ್ ಆಯ್ಕೆ

ನೂತನ ಅಧ್ಯಕ್ಷರಾಗಿ ಪೃಥ್ವಿ ಜಯರಾಮ್ ಆಯ್ಕೆ
Published on

ಆಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪೃಥ್ವಿ ಜಯರಾಮ್  ಆಯ್ಕೆಯಾದರು.

ಹಿಂದಿನ ಸಾಲಿನ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶನಿವಾರದಂದು ಚುನಾವಣೆ ನಿಗದಿಗೊಳಿಸಿತ್ತು. ಅದರಂತೆ ಶನಿವಾರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ ಮಿಕ್ಕೆಲ್ಲ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡವು. 

2023 ರಿಂದ 2026 ನೇ ಅವಧಿ ವರೆಗೆ ಒಟ್ಟು 14 ಮಂದಿಯ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ  ಚುನಾವಣಾಧಿಕಾರಿಗಳಾಗಿ ಬಂದಿದ  ಹೆತ್ತೂರು ನಾಗರಾಜ್, ಹರೀಶ್ ರವರು ತಿಳಿಸಿದರು. 

ನೂತನ ಪದಾಧಿಕಾರಿಗಳ ಪಟ್ಟಿ:

ಅಧ್ಯಕ್ಷ ಪೃಥ್ವಿ ಜಯರಾಮ್ , ಉಪಾಧ್ಯಕ್ಷ ಟಿ.ಕೆ ಕುಮಾರಸ್ವಾಮಿ, ಪ್ರದೀಪ್ ಕುಮಾರ್, ಕಬೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷಾ, ಕಾರ್ಯದರ್ಶಿಗಳಾಗಿ ಸತೀಶ್ ಚಿಕ್ಕಕಣಗಾಲು, ಈಶ್ವರ್, ರುದ್ರಕುಮಾರ್,  ಖಜಾಂಚಿ ನವೀನ್ ಕುಮಾರ್, ನಿರ್ದೇಶಕರುಗಳಾಗಿ ನಂದನ್, ಚೇತನ್, ವಿಶ್ವನಾಥ್, ಸಲೀಂ, ಮಹೇಶ್, ಆಯ್ಕೆ ಗೊಂಡರು.

ಈ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ನಟರಾಜ್ ನಾಕಲಗೂಡು, ಮಾಜಿ ಅಧ್ಯಕ್ಷರುಗಳಾದ ಎಂ.ಪಿ ಹರೀಶ್, ಹೆಚ್ ವಿ ರಾಘವೇಂದ್ರ, ಪತ್ರಕರ್ತರುಗಳಾದ ವೀರಭದ್ರಸ್ವಾಮಿ, ರಾಜೇಶ್, ಮೋಹನ್ ಕಾಡ್ಲೂರು, ಮಂಜುನಾಥ್ ಪ್ರದೀಪ್, ಚೇತನ್, ಗಿರೀಶ್, ರೆಹಮಾನ್ ರವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net