

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಬಿ.ದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎನ್.ಒ. ನಾಗರಾಜ್, ಉಪಾಧ್ಯಕ್ಷ ಕೆ.ಆರ್. ಮಹಂತೇಶಾಚಾರ್ ಅವರನ್ನು ಚಿತ್ರದುರ್ಗದ ಜಿಲ್ಲಾ ಬಂಜಾರ ಭವನದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಜಿಲ್ಲಾ ಬಂಜಾರ (ಲಂಬಾಣಿ)ಸಮಾಜದ ಅಧ್ಯಕ್ಷ ಎಂ. ಸತೀಶ್‌ಕುಮಾರ್, ಎಂ. ಈಶ್ವರಪ್ಪ ಹಿರೇಕಂದವಾಡಿ, ಎಚ್.ಸಿ. ಸತೀಶ್ ಸಾಸಲು, ಬಸವಂತಪ್ಪ ಕಲ್ಲವ್ವನಾಗತಿಹಳ್ಳಿ, ತ್ರಿವೇಣಿ ಗುಂಜಿಗನೂರು, ಲೋಕೇಶ್ವರಪ್ಪ, ರುದ್ರೇಗೌಡ, ರಾಮಸ್ವಾಮಿ, ಲೋಕಣ್ಣ ಗುಂಜಿಗನೂರು, ನಾಗರಾಜ್ ಗುಂಜಿಗನೂರು, ಎಂ.ಪಿ. ಈಶ್ವರಪ್ಪ, ಮಧು ರಂಗೇನಹಳ್ಳಿ, ಬಸವಂತಪ್ಪ, ಮಂಜುನಾಥ್‌ರಂಗವ್ವನಹಳ್ಳಿ ಇದ್ದರು.