ನೂತನ ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ ಆಯ್ಕೆ

22 YERRISWAMY 05
Published on

ಬಳ್ಳಾರಿ : ಇಲ್ಲಿನ ವೀರಶೈವ ಮಹಾಸಭಾ ಜಿಲ್ಲಾ ಸಮಿತಿಗೆ ನಡೆದ ಅಧ್ಯಕ್ಷ ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರ ಅಯ್ಕೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ತಂಡದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಚ್ಚುಗಲ್ಲು ಪಂಚಾಕ್ಷರಪ್ಪ 223 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಹಾನಗಲ್ ಕುಮಾರೇಶ್ವರ ತಂಡದಿಂದ ವೀ.ವಿ. ಮಹಾಸಭಾದ ಹಾಲಿ ಅಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಾನಾಳ್ ಶೇಖರ್ ಪರಭಾವಗೊಂಡಿದ್ದಾರೆ. ಇನ್ನೂ 30 ಜನ ಕಾರ್ಯಾಕಾರಿಣಿ ಸಮಿತಿ ಸದಸ್ಯರಲ್ಲಿ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ತಂಡದ ಎಂಟು ಜನ ಹಾಗೂ ಹಾನಗಲ್ ಕುಮಾರೇಶ್ವರ ತಂಡದ 22 ಜನರು ಆಯ್ಕೆಯಾಗಿದ್ದಾರೆ.
ನಗರದ ಬಸವಭವನದಲ್ಲಿ ಸಹಾಯಕ ಚುನಾವಣಾಧಿಕಾರಿ ಲಿಂಗನಗೌಡ ನೇತೃತ್ವದಲ್ಲಿ ಮತ ಎಣಿಕೆಯ ನಡೆಯಿತು. ಜಿಲ್ಲಾದ್ಯಂತ 7791 ಮತದಾರರ ಪೈಕಿ 5868 ಜನರಿಂದ ಮತದಾನ ಜರುಗಿತು. ಇದರಲ್ಲಿ ಬಿಚ್ಚುಗಲ್ಲು ಪಂಚಾಕ್ಷರಪ್ಪ 2865 ಮತ ಪಡೆದರೆ, ಚಾನಾಳ್ ಶೇಖರ್ 2642 ಮತಗಳನ್ನು ಪಡೆದಿದ್ದಾರೆ.
ನೂತನ ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ ಮಾತನಾಡಿ, ಇದೊಂದು ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ಗೆಲುವು. ಸಂಘಟಿತ ಪ್ರಯತ್ನ, ಶಿಷ್ಯ ವೃಂದ ಸಹಕಾರ ಹಾಗೂ ನನ್ನ ಸೇವೆಯನ್ನು ಪರಿಗಣಿಸಿ ಮತದಾರರು ಆರ್ಶಿವಾದಿಸಿದ್ದಾರೆ. ನಮ್ಮ ತಂಡಕ್ಕೆ ಬಹುಮತ ಬರದಿದ್ದರೂ, ಗೆದ್ದವರೆಲ್ಲ ನಮ್ಮವರೇ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಅಭಿವೃದ್ದಿಯ ಕಾರ್ಯಕ್ಕೆ ಪ್ರಯತ್ನಿಸುವೆ ಎಂದು ಹೇಳಿದರು.
ಕಾರ್ಯಾಕಾರಿ ಸಮಿತಿಗೆ ಗೆದ್ದ ಎರಡು ತಂಡದವರು : ಆನೆ ರೂಪ, ಎಂ.ಕಲ್ಯಾಣಿ, ಯಾಟಿ ಭ್ರಮರಾಂಭ, ಶಾನವಾಸಪುರ ಅನಿತ, ನಂದ ಎಸ್.ಪಾಟೀಲ್, ಸಿ.ಎಂ. ಪುಷ್ಪಲತಾ, ಎಂ.ವಿಜಯಲಕ್ಷ್ಮಿ, ವನಜಾಕ್ಷಿ, ಹೇಮ ಮಂಜುನಾಥ ಹೊಸರುಮಠ, ಛಾಯ ಮಂಜುನಾಥ, ಟಿಎಂ.ಕಿರಣ ಕುಮಾರಸ್ವಾಮಿ, ಗೋನಾಳ್ ಎಂ.ನಾಗಭೂಷಣಗೌಡ, ಯಾಳ್ಪಿ ಮೇಟಿ ದಿವಾಕರಗೌಡ, ದರೂರು ಜಿ. ಸಾಗರ್, ಕೋರಿ ಚೆನ್ನಬಸಪ್ಪ, ಬಿ.ನಾಗರಾಜ, ಯು.ನಂದೀಶ, ಗಂಗಾವತಿ ವೀರೇಶ, ಕೆ.ಪಿ.ಚೆನ್ನಬಸವರಾಜ ಕರ್ಚಿಗನೂರು, ಕನಕಗಿತಿ ರೇಣುಕಪ್ಪ, ಮದಿರೆ ಕುಮಾರಸ್ವಾಮಿ, ಎಸ್.ಎಂ. ನಾಗರಾಜಸ್ವಾಮಿ, ಎನ್.ಚಂದ್ರಮೋಹನ, ಎಸ್.ವೈ.ಕಟ್ಟೆಗೌಡ ಸಂಗನಕಲ್ಲು, ಎಚ್.ಆರ್.ಮಲ್ಲಿಕಾರ್ಜುನಗೌಡ ಹಲಕುಂದಿ, ಕೆ. ಸುರೇಶ ಗೌಡ, ಕೆ.ಎಂ. ಶಿವಕುಮಾರ, ಡಿ.ಅರುಣ ಕುಮಾರ, ಆರ್. ಪ್ರಭುಶೇಖರಗೌಡ, ಪಿ.ಮಲ್ಲಿಕಾರ್ಜುನ ಗೆಲುವಿನ ನಗೆ ಬೀರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net