ನುಸುಳುವಿಕೆಯಿಂದ ಸ್ಥಳೀಯರಲ್ಲಿ ಆತಂಕ

carona logo
Published on

ಅಳ್ನಾವರ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗá-ತ್ತಿರುವುದು ಹಾಗೂ ತಪಾಸಣೆ ಕೇಂದ್ರದ ಅಧಿಕಾರಿಗಳ ಕಣ್ತಪ್ಪಿಸಿ ಪಟ್ಟಣದ ಒಳರಸ್ತೆ, ಕಾಲá-ದಾರಿಗಳಿಂದ ಆಗಮಿಸುವವರಿಂದ ಸ್ಥಳೀಯರು ಭಯಪಡುವಂತಾಗಿದೆ.

ಕರೊನಾ ಲಾಕ್​ಡೌನ್ ಆರಂಭದಿಂದ ತಾಲೂಕಿನಲ್ಲಿ ದಿನಸಿ ವಸ್ತುಗಳಿಗೆ ಕೊರತೆಯಂತೂ ಕಂಡುಬರುತ್ತಿಲ್ಲ. ಅಕ್ಕಪಕ್ಕದ ಹಳ್ಳಿಗಳ ರೈತರು ತಮ್ಮ ಹೊಲಗಳಲ್ಲಿನ ತರಕಾರಿಗಳನ್ನು ನೇರವಾಗಿ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆ ಸಹಿತ ಮೂರು ಜಿಲ್ಲೆಗಳ ಗಡಿಭಾಗ, ಗೋವಾ ರಾಜ್ಯಕ್ಕೆ ಹತ್ತಿರವಿರುವ ಪ್ರದೇಶ ಅಳ್ನಾವರ. ಹೀಗಾಗಿ ಸ್ಥಳೀಯರಲ್ಲಿ ಕರೊನಾ ಭೀತಿ ಇದೆ.

ತಾಲೂಕಿನಲ್ಲಿ 35ಕ್ಕೊ ಹೆಚ್ಚು ಜನರು ಹೊರ ಪ್ರದೇಶದಿಂದ ಆಗಮಿಸಿದ್ದಾರೆ. ಈ ಕುರಿತು ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯá-ತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ನಿರೀಕ್ಷಕರು ಹೊರ ಪ್ರದೇಶಗಳಿಂದ ಬಂದ ಜನರಿಗೆ 14 ದಿನಗಳವರೆಗೆ ಮನೆಯಿಂದ ಹೊರಗೆ ತಿರುಗಾಡದಂತೆ ಮತ್ತು ಪ್ರತ್ಯೇಕವಾಗಿ ವಾಸಿಸುವಂತೆ ಸೂಚನೆ ನೀಡುತ್ತಿದ್ದಾರೆ.

ಜನರು ಸ್ವಯಂ ನಿರ್ಬಂಧ ಹಾಕಿಕೊಂಡು ಜಾಗ್ರತೆ ವಹಿಸಿ ಸರ್ಕಾರದ ನಿಯಮಗಳನ್ನು ಬೆಂಬಲಿಸಬೇಕು.| ವೈ.ಜಿ. ಗದ್ದಿಗೌಡರ, ಅಳ್ನಾವರ ಪಪಂ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net