ನುಲಿ ಚಂದಯ್ಯನವರು ಸರ್ವರ ಏಳಿಗಾಗಿ ಶ್ರಮಿಸಿದವರು-ರಂಜಾನ್ ದರ್ಗಾ

NULI CHANDAYYA jayannati
ಜಿಲ್ಲಾಡಳತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗುರುವಾರ ರಂದು ಏರ್ಪಡಿಸಲಾಗಿದ್ದ ಶ್ರೀನುಲಿ ಚಂದಯ್ಯ ನವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published on

ಶ್ರೀನುಲಿ ಚಂದಯ್ಯನವರ ಜಯಂತಿ ಕಾರ್ಯಕ್ರಮ

ಬೆಳಗಾವಿ: ಬಸವಣ್ಣವರ ವಿಚಾರಗಳಿಗೆ ಮನಸೋತ ನುಲಿ ಚಂದಯ್ಯನವರು ದೇಶದ ರಾಜನಾಗಿದ್ದರೂ ಕೂಡಾ ಕಾಯಕದಲ್ಲಿ ತೊಡಗಿಕೊಂಡು ಯಾವುದೇ ಜಾತಿ, ಧರ್ಮ, ಲಿಂಗ, ಬಡವ, ಶ್ರೀಮಂತ, ಎಂಬ ಬೇಧ ಭಾವ ವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸಿದವರು ನುಲಿ ಚಂದಯ್ಯ ನವರು ಎಂದು ಸಾಹಿತಿ ರಂಜಾನ್ ದರ್ಗಾ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗುರುವಾರ ರಂದು ಏರ್ಪಡಿಸಲಾಗಿದ್ದ ಶ್ರೀನುಲಿ ಚಂದಯ್ಯ ನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಾಸೋಹ, ಕಾಯಕ, ಅಂತಃಕರಣ ಅನುಸರಿಸಿದ ನುಲಿ ಚಂದಯ್ಯನವರು ದಾಸೋಹ, ಕಾಯಕ ಎಂದರೆ ಸಮಾಜದ ಕಾಳಜಿಯನ್ನು ಹೊಂದುವುದು, ಸಮಾಜದ ಜನರ ಏಳಿಗೆಯ ಜೊತೆಗೆ ತಮ್ಮಸುತ್ತಲಿನ ಪರಿಸರ ರಕ್ಷಣೆ, ಪ್ರಾಣಿ ರಕ್ಷಣೆ ಸೇರಿದಂತೆ ಎಲ್ಲ ಸಕಲ ಜೀವಿಗಳಿಗಾಗಿ ಶ್ರಮಿಸುವುದೆ ಕಾಯಕ ಎಂದು ಸಮಾಜಕ್ಕೆ ಅರ್ಥೈಸಿದವರು ನುಲಿ ಚಂದಯ್ಯ ನವರು ಎಂದು ರಂಜನ್ ದರ್ಗಾ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಹಡಗಿನಾಳ ಮಠದ ಮುತ್ತೇಶ್ವರ ಸ್ವಾಮಿಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಅರಳಿಕಟ್ಟಿ ವೀರಪ್ಪ ಮಠದ ಶಿವಮೂರ್ತಿ ಸ್ವಾಮಿಜಿಗಳು ಮತನಾಡಿ ಸಮಾಜಕ್ಕೆ ನುಲಿ ಚಂದಯ್ಯನವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿಯಾದ ವಿಜಕುಮಾರ ಎಮ್. ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ, ರಾಷ್ಟ್ರೀಯ ಸಂಘಟನೆ ಹಾಗೂ ಜಾಗತಿಕ ಲಿಂಗಾಯಿತ ಮಹಾಸಭೆ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ, ಬೆಳಗಾವಿ ಕೊರುವ ಸಮಾಜದ ಜಿಲ್ಲಾ ಅಧ್ಯಕ್ಷ ರಾಮಜಿ ಭಜಂತ್ರಿ, ಶಹನಾಯಿ ವಾದಕ ಪಂಡಿತ ಬಾಲೇಶ ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net