ನುಲಿ ಚಂದಯ್ಯ ಭಾವಚಿತ್ರ ಮೆರವಣಿಗೆ

Untitled design (3)
ತಾವರಗೇರಾದ ಬಜಂತ್ರಿ ಸಮುದಾಯದವರಿಂದ ನುಲಿ ಚಂದಯ್ಯ ಜಯಂತಿ ಗುರುವಾರ ಆಚರಿಸಲಾಯಿತು. ಪ್ರಮುಖರಾದ ಹೊಳೆಯಪ್ಪ , ಮಂಜುನಾಥ್, ಶ್ಯಾಮಣ್ಣ , ಪಪಂ ಸದಸ್ಯ ಶಾಮಣ್ಣ ಭಜಂತ್ರಿ, ಮರಿಯಪ್ಪ ಇದ್ದರು.
Published on

ತಾವರಗೇರಾ: ಪಟ್ಟಣದಲ್ಲಿ ನುಲಿ ಚಂದಯ್ಯ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಗುರುವಾರ ನಡೆಯಿತು.


ಭಾವಚಿತ್ರ ಮೆರವಣಿಗೆ ಶ್ರೀದೇವಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕಳಸ, ವಾದ್ಯದೊಂದಿಗೆ ಸಂಚರಿಸಿ ನುಲಿ ಚಂದಯ್ಯ ವೃತ್ತಕ್ಕೆ ಸಮಾರೋಪಗೊಂಡಿತು. ನಂತರ ಅನ್ನ ಸಂತರ್ಪಣೆ ನಡೆಯಿತು. ನುಲಿ ಚಂದಯ್ಯ ಸಂಘದ ಅಧ್ಯಕ್ಷ ಮಂಜುನಾಥ ಭಜಂತ್ರಿ, ಗೌರವ ಅಧ್ಯಕ್ಷ ಹೊಳೆಯಪ್ಪ , ಉಪಾಧ್ಯಕ್ಷ ಶ್ಯಾಮಣ್ಣ ತುರ್ವಿಹಾಳ, ಪಪಂ ಸದಸ್ಯ ಶ್ಯಾಮಣ್ಣ ಭಜಂತ್ರಿ, ಗ್ರಾಪಂ ಮಾಜಿ ಸದಸ್ಯ ಮರಿಯಪ್ಪ ಇದ್ದರು.


ಪಟ್ಟಣ ಪಂಚಾಯಿತಿ: ಪಪಂ ಕಚೇರಿಯಲ್ಲಿ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರು ಜಯಂತಿಯನ್ನು ಗುರುವಾರ ಆಚರಿಸಲಾಯಿತು. ಮುಖ್ಯಾಧಿಕಾರಿ ನಬಿಸಾಬ್ ಖುದನವರ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಸಿಬ್ಬಂದಿಗಳಾದ ಪ್ರಲ್ಲಾದ ಜೋಶಿ, ಖಾಜಾಹುಸೇನ್, ಶಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ, ಮರೇಶ, ಶಾಮ್ ಈಳಗೇರ ಇದ್ದರು.


ನಾಡಕಚೇರಿ: ನುಲಿಯ ಚಂದಯ್ಯ ಹಾಗೂ ನಾರಾಯಣ ಗುಗು ಜಯಂತಿಯನ್ನು ನಾಡಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಉಪ ತಹಶೀಲ್ದಾರ್ ಶರಣಬಸವೇಶ, ಸಿಬ್ಬಂದಿ ಸೂರ್ಯಕಾಂತ, ಶ್ರೀಶೈಲ ಮಲ್ಲಿಕಾರ್ಜುನ, ಚನ್ನಬಸವಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net