ನುಡಿಹಬ್ಬದಲ್ಲಿ ಪಾಲ್ಗೊಂಡು ಕನ್ನಡ ತೇರನ್ನು ಎಳೆಯೋಣ

01Kush01
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಬುಧವಾರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ.ಆರ್.ನಾರಾಯಣ ಅವರನ್ನು ಸನ್ಮಾನಿಸಿದರು. ಚಂದ್ರಮೋಹನ್, ವನಿತಾ, ರಘು, ಸುನೀಲ್, ಪ್ರಭುದೇವ್, ಪ್ರದೀಪ್, ಗಣೇಶ್, ನಾಗೇಶ್, ವಿನೋದ್, ರಾಮಚಂದ್ರ, ರಮ್ಯಾ ಇತರರಿದ್ದರು.
Published on

ಕುಶಾಲನಗರ: ಕನ್ನಡ ಮನಸುಗಳೆಲ್ಲ ಒಟ್ಟಾಗಿ ಸೇರಿ ಆಚರಿಸುವ ಕನ್ನಡದ ಹಬ್ಬವೇ ಕನ್ನಡ ಸಾಹಿತ್ಯ ಸಮ್ಮೇಳನ, ಎಲ್ಲರೂ ಫೆ.3ರ ನುಡಿಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಕನ್ನಡದ ತೇರನ್ನು ಎಳೆಯೋಣ ಎಂದು ಕುಶಾಲನಗರ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ.ಆರ್.ನಾರಾಯಣ ತಿಳಿಸಿದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನ್ನಡಿಗರೆಲ್ಲ ಒಗ್ಗಟ್ಟಾಗಿ ಸೇರಿ ಸಂಭ್ರಮದಿಂದ ಹಬ್ಬ ಆಚರಿಸುವುದಾದರೆ ಅದಕ್ಕಿಂತ ದೊಡ್ಡ ಸಂತೋಷ ಬೇರೆಯಿಲ್ಲ. ಕನ್ನಡ ಭಾಷೆಗೆ ತನ್ನದೇ ಆದ ವಿಶೇಷ ಶಕ್ತಿಯಿದೆ. ಸಮ್ಮೇಳನದಿಂದ ಪರಸ್ಪರ ಭಾಂಧವ್ಯ, ಒಡನಾಟ ಹಾಗೂ ಸಂಪರ್ಕ ಬೆಸೆಯುತ್ತದೆ ಎಂದರು.

ಕುಶಾಲನಗರ ನೂತನ ತಾಲೂಕು ರಚನೆಯಲ್ಲಿ ಗಣ್ಯರ, ನಾಗರಿಕರ ಹೋರಾಟವಿದೆ. ತಾಲೂಕಿಗೆ ನೂತನ ಕಸಾಪ ಘಟಕ ದೊರೆತಿರುವುದು ಸಂತಸ ತಂದಿದೆ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ರಾಷ್ಟ್ರೀಯ ಸಮಿತಿ ಸದಸ್ಯ ಸುನೀಲ್ ಪೊನ್ನೇಟ್ಟಿ, ಪ್ರಭುದೇವ್, ರಘು ಹೆಬ್ಬಾಲೆ, ಕೆ.ಕೆ.ನಾಗರಾಜ್ ಶೆಟ್ಟಿ, ಗಣೇಶ್ ಕುಡೆಕಲ್, ಪ್ರದೀಪ್, ವಿನೋದ್, ಕೆ.ಎಸ್.ನಾಗೇಶ್, ನಾರಾಯಣ ಪುತ್ರ ರಾಮಚಂದ್ರ, ಸೊಸೆ ರಮ್ಯಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net