ನುಡಿದಂತೆ ನಡೆದ ಡಾ. ಮಹಾಂತ ಶ್ರೀಗಳು

Ndr1
Published on

ನಂದೇಶ್ವರ: ಬಸವ ತತ್ತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದ ಕೀರ್ತಿ ಸವದಿ ಇಳಕಲ ಮಠದ ಲಿಂ. ಡಾ.ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಐ.ಆರ್.ಮಠಪತಿ ಹೇಳಿದರು.

ಸಮೀಪದ ಸವದಿ ಗ್ರಾಮದ ಲಿಂ. ಸಂಗನ ಬಸವ ಶಿವಯೋಗಿಗಳ ೮೩ನೇ ಸ್ಮರಣೋತ್ಸವ ಹಾಗೂ ಲಿಂ.ಡಾ. ಮಹಾಂತ ಶಿವಯೋಗಿಗಳ ೭ನೇ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಂ.ಡಾ. ಮಹಾಂತ ಶಿವಯೋಗಿಗಳು ಲಕ್ಷ ಲಕ್ಷ ಜನರನ್ನು ದುಶ್ಚಟಗಳಿಂದ ಶಾಶ್ವತ ದೂರ ಮಾಡಿ ಕಣ್ಣೀರಿಡುವ ಕುಟುಂಬಗಳಿಗೆ ನೆಮ್ಮದಿ ಜೀವನ ಕಲ್ಪಿಸಿದ್ದಾರೆ ಎಂದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಸವದಿ ಇಳಕಲ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿದರು.

ತಿಕೋಟಾದ ಮಲ್ಲಿಕಾರ್ಜುನ ಸ್ವಾಮೀಜಿ, ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಅಶೋಕ ಬರಗುಂಡಿ, ರವಿ ಯಡಹಳ್ಳಿ, ಸಿದ್ದಲಿಂಗಪ್ಪ ಬರಗುಂಡಿ, ವೆಂಕಟಾಪುರದ ಬಸವ ರಾಜಪ್ಪನವರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಬಾಡಗಿ, ಡಿ.ಬಿ.ಠಕ್ಕಣ್ಣವರ, ರೂಪಾ ಕಾಂಬಳೆ,ಸುಜಾತಾ ಠಕ್ಕಣ್ಣವರ, ಸಿದ್ದರಾಮ ಖಾನಾಪುರ, ಭೀಮಣ್ಣ ಗಾಳಿ, ಸಂಗನಗೌಡ ಪಾಟೀಲ, ಅಪ್ಪಾಲಾಲ ಪಾರ್ಥನಳ್ಳಿ, ಸಂಗಣ್ಣ ಗೂಗವಾಡ ಇತರರು ಇದ್ದರು. ಪ್ರಕಾಶ ಪಾಟೀಲ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net