

ಚನ್ನರಾಯಪಟ್ಟಣ : ತಾಲೂಕಿನ ನುಗ್ಗೇಹಳ್ಳಿ ಗ್ರಾಪಂನಲ್ಲಿ ಕಳೆದ 7 ತಿಂಗಳಿಂದ 40 ಲಕ್ಷ ರೂ. ಅವ್ಯವಹಾರ ನಡೆದಿದ್ದು ಪಿಡಿಒ ಎಚ್.ಜಿ.ಹರೀಶ್ ಅವರನ್ನು ಅಮಾನತು ಮಾಡಬೇಕೆಂದು ವಿಧಾನ ಪರಿ?ತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆಗ್ರಹಿಸಿದರು.
ಇರುವ ಕೇವಲ ಒಂದು ಕಂಪ್ಯೂಟರ್ ರಿಪೇರಿಗೆಂದು 60 ಸಾವಿರ ರೂ. ಹಣವನ್ನು ವಿಳಾಸವಿಲ್ಲದ ಇಂಡಿಯನ್ ಎನ್ನುವ ವ್ಯಕ್ತಿಗೆ ನೀಡಿದ್ದಾರೆ ಎಂದು ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಾಗೆಯೇ ಯಾವ ಕಾಮಗಾರಿ ಎಂಬುದನ್ನೇ ನಮೂದಿಸದೆ ಬೇರೆಬೇರ ಎಲೆಕ್ಟಿಕಲ್ ಅಂಗಡಿಗಳಿಗೆ ಒಂದೇದಿನ 6.4 ಲಕ್ಷ ರೂ. ಹಣ ಪಾವತಿ ಮಾಡಿದ್ದಾರೆ. ಒಂದು ನಲ್ಲಿ ರಿಪೇರಿಗೆ 10 ಸಾವಿರ ರೂ. ಬಿಲ್ ಮಾಡಿದ್ದಾರೆ ಎಂದರು.
ಗ್ರಾಪಂನಲ್ಲಿ ಕಂಪ್ಯೂಟರ್ ಇದೆ ಆದರೆ ಪ್ರಿಂಟರ್ ಇಲ್ಲ. ಹೊರಗಿನಿಂದ ಪ್ರಿಂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಏ.12 ರಂದು ಪಂಚಾಯಿತಿಗೆ 9 ಮಂದಿ ಅಧಿಕಾರಿಗಳು ಭೇಟಿ ನೀಡಿದ ವೇಳೆ ಅವರ ಊಟದ ಖರ್ಚಿಗಾಗಿ 27 ಸಾವಿರ ರೂ. ಖರ್ಚು ಮಾಡಿದ್ದಾರೆ. ಪಂಚಾಯಿತಿಯಿಂದ ಹಣ ಪಾವತಿಯಾಗಿರುವ ಹೋಟೆಲ್ ನವರನ್ನು ಕೇಳಿದರೆ 3 ಸಾವಿರ ರೂ. ಖರ್ಚಾಗಿದೆ ಎನ್ನುತ್ತಾರೆ. ಇವೆಲ್ಲದರ ವಿರುದ್ಧ ಸಮಗ್ರ ತನಿಖೆ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲೂ ಹಣ ಲೂಟಿ ಮಾಡುತ್ತಿದ್ದಾರೆ. ಬೆಳಗೀಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಟಗೀಹಳ್ಳಿಯಲ್ಲಿ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಮೂರು ತಿಂಗಳಿಂದ ಇನ್ನೂ ಜಿಪಿಎಸ್ ಮಾಡಿಲ್ಲ. ಕೇಳಿದರೆ ಶಾಸಕರನ್ನು ಕೇಳುವಂತೆ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾಕ್ಕೂ ಶಾಸಕರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಎಲ್ಲ ಕೆಲಸವನ್ನೂ ಅವರು ಹೇಳಿದಂತೆ ಮಾಡಬೇಕೆಂದರೆ ಹೇಗೆ?, ಇದೆಲ್ಲದರ ಬಗ್ಗೆ ಮುಂಬರುವ ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದನ್ನು ಶಾಸಕರೇ ಹೇಳಿಕೊಡುತ್ತಿದ್ದಾರೆ. ಈಗ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೂ ಅವರೇ ಹೊಣೆಗಾರರಾಗಬೇಕಾಗುತ್ತದೆ. ಇನ್ನೊಂದು ವಾರದಲ್ಲಿ ಏನು ಕ್ರಮ ಆಯಿತೆಂಬುದು ಬಹಿರಂಗವಾಗಬೇಕು ಎಂದರು .
ಗ್ರಾಪಂ ಸದಸ್ಯ ಕಿರಣ್ ಮಾತನಾಡಿ, ಪರಿಶಿ?್ಟ ಜಾತಿಯವರಿಗೆ ಮೀಸಲಾಗಿರುವ ಹಣವನ್ನು ಇತರ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಆರ್ಥಿಕವಾಗಿ ಸದೃಢರಾಗಿರುವವರಿಗೇ ವಿಶೇ? ಚೇತನರಿಗೆ ನೀಡುವ ಆರ್ಥಿಕ ನೆರವು ನೀಡಿದ್ದಾರೆ. ಗ್ರಾಮ ಸಭೆಗಳು ಕಾಟಾಚಾರಕ್ಕೆ ಎಂಬಂತಾಗಿದೆ. ಸಭೆಯ ನಡವಳಿಕೆಗಳನ್ನು ಬರೆದ ನಂತರ 2 ಪುಟ ಖಾಲಿ ಬಿಟ್ಟು ಸದಸ್ಯರಿಂದ ಸಹಿ ಮಾಡಿಸಿಕೊಳ್ಳಲಾಗುತ್ತದೆ ಎಂದು ದೂರಿದರು. ಪಿಡಿಒ ಅವರನ್ನು ಪ್ರಶ್ನೆ ಮಾಡಲು ಮುಂದಾದರೆ ದೌರ್ಜನ್ಯ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಗೌಡಾಕಿ ಮಂಜಪ್ಪ, ಸವಿತಾ, ರಮ್ಯಾ ಲೋಕೇಶ್ ಇದ್ದರು.