ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಚಿತ್ರ ನಟ ಪುನೀತ್ ದಂಪತಿ ಭೇಟಿ

9 Dwd 5
Published on

ಧಾರವಾಡ: ನಗರದ ಪ್ರಸಿದ್ಧ ನುಗ್ಗಿಕೇರಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಪವರ್​ಸ್ಟಾರ್ ಪುನೀತ್ ರಾಜಕುಮಾರ್- ಅಶ್ವಿನಿ ದಂಪತಿ ಸೋಮವಾರ ಸಂಜೆ ಭೇಟಿ ನೀಡಿದರು.

ಪುನೀತ್, ಅಶ್ವಿನಿ ಹಾಗೂ ಕುಟುಂಬದವರು 2 ದಿನದ ಹಿಂದೆ ದಾಂಡೇಲಿಗೆ ತೆರಳಿದ್ದರು. ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಧಾನ ಅರ್ಚಕ ಕಾಂತೇಶ ಬೊಮ್ಮನಹಳ್ಳಿ, ಟ್ರಸ್ಟಿಗಳಾದ ಅರುಣಾ ದೇಸಾಯಿ, ವ್ಯಾಸ ದೇಸಾಯಿ, ಗುರುರಾಜ, ಬದರಿನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net