

ಹುಬ್ಬಳ್ಳಿ: ನಗರದ ಪ್ರಮುಖ ನೀಲಿಜಿನ್ ರಸ್ತೆಯ ಶಾಪ ವಿಮೋಚನೆ ಸದ್ಯಕ್ಕಂತೂ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಕೆಲವು ವರ್ಷಗಳಿಂದ ಡಾಂಬರ್ ಕಾಣದ ಈ ರಸ್ತೆಗೆ ಕೇಂದ್ರ ರಸ್ತೆ ನಿಧಿ (ಸಿಆರ್ಎಫ್) ಅನುದಾನದಲ್ಲಿ ಸಿಮೆಂಟ್ ರಸ್ತೆ ನಿರ್ವಿುಸಲು ತೀರ್ವನಿಸಲಾಯಿತು. ಆದರೆ, ತಾಂತ್ರಿಕ ಅಡಚಣೆಯಿಂದಾಗಿ ಈ ತೀರ್ಮಾನ ಕಾರ್ಯಗತಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಬೇಕಾಯಿತು.
ಒಟ್ಟು 25 ಕೋಟಿ ರೂ. ವೆಚ್ಚದಲ್ಲಿ ನೀಲಿಜಿನ್ ರಸ್ತೆ ಹಾಗೂ ಅಕ್ಕಪಕ್ಕದ ಸಂಪರ್ಕ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ನಿರ್ವಿುಸುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ ಪ್ರಾರಂಭಿಸಿತಾದರೂ, ಈ ರಸ್ತೆಯಲ್ಲಿ ಒಳಚರಂಡಿ ನಿರ್ವಿುಸಬೇಕಿದ್ದ ಮಹಾನಗರ ಪಾಲಿಕೆಯ ಆಮೆಗತಿ ಕಾಮಗಾರಿ ವೈಖರಿ ಸಿಸಿ ರಸ್ತೆ ನಿರ್ವಣದ ವೇಗಕ್ಕೆ ಬ್ರೇಕ್ ಹಾಕಿತು.
ಲಾಕ್ಡೌನ್ ಜಾರಿಗೊಳ್ಳುವ ಮುಂಚೆಯೇ ಪಾಲಿಕೆ ಪ್ರಾರಂಭಿಸಿರುವ ಯುಜಿಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಟ್ಟು 620 ಮೀ. ಉದ್ದದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಇದುವರೆಗೆ ಪೂರ್ಣಗೊಂಡಿದ್ದು, ಅಂದಾಜು 200 ಮೀ. ಮಾತ್ರ. ಈ ಮಧ್ಯೆ ಲಾಕ್ಡೌನ್ ಘೊಷಣೆಯಾಗಿದ್ದರಿಂದ ಸಂಪೂರ್ಣ ಕಾಮಗಾರಿ ಸ್ಥಗಿತಗೊಂಡಿತು.
ಇದರೊಂದಿಗೆ ದೇಶಪಾಂಡೆನಗರದಲ್ಲಿ ನಿರ್ವಿುಸಿರುವ ಸಿಸಿ ರಸ್ತೆಯ ಬಾಕಿ ಮೊತ್ತ 25 ಕೋಟಿ ರೂ. ಗಳನ್ನು ಗುತ್ತಿಗೆದಾರರಿಗೆ ಇದುವರೆಗೆ ಬಿಡುಗಡೆ ಮಾಡದಿರುವುದು ಸಹ ಕಾಮಗಾರಿ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣ.
ನೀಲಿಜಿನ್ ರಸ್ತೆಯಲ್ಲಿ ಕಾಮಗಾರಿ ವಿಳಂಬವಾದರೂ ನ್ಯೂ ಕಾಟನ್ ಮಾರ್ಕೆಟ್ನ ಸಾಂಸ್ಕೃತಿಕ ಭವನ ಪಕ್ಕದ ರಸ್ತೆಯಲ್ಲಾದರೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕಿತ್ತು. ಆದರೆ, ದೇಶಪಾಂಡೆ ನಗರದ ಸಿಸಿ ರಸ್ತೆ ಕಾಮಗಾರಿಯ ಹಣ ನೀಡದ ಕಾರಣ ಗುತ್ತಿಗೆದಾರರು ಕಾಮಗಾರಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಿಸಿ ರಸ್ತೆ ನಿರ್ವಣದ ಬಾಕಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.| ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
EndFragment