

ಯಳಂದೂರು: ತಾಲೂಕಿನ ಗಣಿನನೂರು ಗ್ರಾಮದ ಸುವರ್ಣಾವತಿ ನದಿ ನಡುವೆ ಇರುವ ಶ್ರೀ ನೀಲಕಂಠೇಶ್ವರ ದೇಗುಲದ ಬಾಗಿಲು ಮುರಿದು ಶುಕ್ರವಾರ ರಾತ್ರಿ ಕಳ್ಳತನ ಮಾಡಲಾಗಿದೆ.
ದೇಗುಲದಲ್ಲಿದ್ದ ಗೋಲಕವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಅಲ್ಲದೆ ಚಿನ್ನದ ತಾಳಿಯನ್ನು ಕಳ್ಳತನ ಮಾಡಿದ್ದಾರೆ. ದೇಗುಲದ ಮುಖ್ಯ ದ್ವಾರವನ್ನು ಒಡೆದು ಈ ಕಳ್ಳತನ ನಡೆಸಲಾಗಿದೆ. ಸ್ಥಳೀಯರು ಪೂಜೆ ಮಾಡಿಸಲೆಂದು ದೇವಸ್ಥಾನಕ್ಕೆ ತೆರಳಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.