ನೀಲಕಂಠೇಶ್ವರ ಜಾತ್ರೆ 2ರಿಂದ

Sharanaya swami
Published on

ಕಲಬುರಗಿ: ಅಫಜಲಪುರ ತಾಲೂಕಿನ ನೀಲೂರದ ಶ್ರೀ ಬಂಗಾರ ಜಡೆ ನೀಲಕಂಠೇಶ್ವರ ಗೋಣಿರುದ್ರೇಶ್ವರ ಹಿರೇಮಠದ ಜಾತ್ರಾ ಮಹೋತ್ಸವ ಫೆ.೨ರಿಂದ ೧೨ರವರೆಗೆ ನಡೆಯಲಿದೆ ಎಂದು ಶ್ರೀಮಠದ ಧರ್ಮಾಧಿಕಾರಿ ಶ್ರೀ ಶರಣಯ್ಯ ಹಿರೇಮಠ ತಿಳಿಸಿದರು.

ಫೆ.೨ರಿಂದ ೧೨ರವರೆಗೆ ನಿತ್ಯ ಸಂಜೆ ೮ಕ್ಕೆ ಶ್ರೀ ಲಚ್ಯಾಣ ಶ್ರೀ ಸಿದ್ಧಲಿಂಗ ಮಹಾರಾಜರ ಮಹಾಪುರಾಣ ನಡೆಯಲಿದ್ದು, ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯರು, ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ಶ್ರೀ ಸಿದ್ಧರಾಮ ಶಿವಾಚಾರ್ಯರು, ಶ್ರೀ ಅಪ್ಪಾರಾವ ದೇವಿ ಮುತ್ಯಾ ಸಾನ್ನಿಧ್ಯದಲ್ಲಿ ಮಾಲಿಕಯ್ಯ ಗುತ್ತೇದಾರ್ ಉದ್ಘಾಟಿಸಲಿದ್ದು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿತ್ಯ ಸಂಜೆ ೮ಕ್ಕೆ ಪುರಾಣದಲ್ಲಿ ವಿವಿಧ ಪೂಜ್ಯರು, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ಸಾಧಕರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಮಹಾಂತೇಶ ಹಾಲಮಳ್ಳಿ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಫೆ.೧೦ರಂದು ಬಂಗಾರದ ಅಂಗಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೆ.೧೨ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಅಯ್ಯಾಚಾರ, ದೀಕ್ಷಾ ಹೋಮ ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಂಜೆ ೮ಕ್ಕೆ ಮಹಾ ಮಂಗಲ ಮಹೋತ್ಸವ ನೆರವೇರಲಿದೆ ಎಂದು ಹೇಳಿದರು.

ಭಗವಂತರಾವ ಕಾಮಜಿ, ಸಂಗಮನಾಥ ಹೂಗಾರ, ವಿಶ್ವನಾಥ ಅಷ್ಟಗಿ, ನಾಗಲಿಂಗಯ್ಯ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net