

ಚಿತ್ರದುರ್ಗ: ಶುದ್ಧ ಕುಡಿಯುವ ನೀರು ಪೂರೈಕೆಯಿಂದ ಹಲವು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದ್ದು,ಗ್ರಾಪಂಗಳಲ್ಲಿ ತಿಂಗಳಿಗೆ ಒಮ್ಮೆಯಾದರೂ ವಿಶೇಷ ಸಭೆ ನಡೆಸಿ ಪರಿಸರದ ಸ್ವಚ್ಛತೆ ಮತ್ತು ನೀರು ನೈರ್ಮಲ್ಯದ ಕುರಿತು ಚರ್ಚಿಸ ಬೇಕಿದೆ ಎಂದು ತಾಲೂಕ ಆ ರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಸಿರಿಗೆರೆ ಗ್ರಾಪಂದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು,ಸ್ವಚ್ಛ ನೀರು ಆ ರೋಗ್ಯವನ್ನು ಕಾಪಾಡುತ್ತದೆ. ಸದಸ್ಯರು,ಗ್ರಾಮಸ್ಥರು ತಮ್ಮೂರಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸ ಬೇಕೆಂದು ಮನವಿ ಮಾಡಿದರು.
ತಾಲೂಕು ಆರೋಗ್ಯಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ,ಖಾಲಿ ನಿವೇಶನಗಳಲ್ಲಿ ತ್ಯಾಜ್ಯಶೇಖರಣೆಯಾಗಲು,ಕೊ ಳಚೆ ನೀರು ನಿಲ್ಲಲು ಅವಕಾಶ ನೀಡಬಾರದು. ಈ ಕುರಿತಂತೆ ನಿವೇಶನ ಮಾಲೀಕರಿಗೆ ತಿಳಿಸಬೇಕು. ಜಲಮೂಲಗಳ ಸುಸ್ಥಿತಿಯಲ್ಲಿ ಇಡ ಬೇಕು. ಕಾಲಕಾಲಕ್ಕೆ ಕುಡಿಯುವ ನೀರನ್ನು ಪರೀಕ್ಷಿಸಿ ಅದರ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳ ಬೇಕೆಂದರು.
ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿದರು.ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್,ಸುನಿಲ್.ಡಾ.ತಿಮ್ಮೇ ಗೌಡ,ಗ್ರಾ.ಪಂ.ಅಧ್ಯಕ್ಷೆ ಕೆ.ಹಾಲಮ್ಮ, ಉಪಾಧ್ಯಕ್ಷೆ ಗೀತಾಶಿವಮೂರ್ತಿ,ಪಿಡಿಒ ಹನ್ಸಿರಾಬಾನು,ಎಸ್‌ಡಿಎ ರಾಮಕೃಷ್ಣಪ್ಪ ಗ್ರಾಪಂ ಸದಸ್ಯರು ಇದ್ದರು.