ನೀರು ಸರಬರಾಜು ನೌಕರರಿಂದ ಅರೆಬೆತ್ತಲೆ ಪ್ರತಿಭಟನೆ

1111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ಸರಬರಾಜು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ 358 ಜನರ ಮರುನೇಮಕ ಹಾಗೂ 4 ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ನಗರದ ಪಾಲಿಕೆ ಆವರಣದಲ್ಲಿ ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ನೌಕರರು 24ನೇ ದಿನವಾದ ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜನಜಾಗೃತಿ ಸಂದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ನೌಕರರ ಬದುಕನ್ನು ಬೀದಿಗೆ ತಂದು ಅರೆಬೆತ್ತಲೆ ಪ್ರತಿಭಟನೆ ಮಾಡುವ ಸ್ಥಿತಿಗೆ ತಂದಿದ್ದಾರೆ. ಪಾಲಿಕೆಯಲ್ಲಿನ ಪ್ರತಿಯೊಂದು ಭ್ರಷ್ಟಾಚಾರವನ್ನು ಹೊರಗೆಳೆಯಲಾಗುವುದು. ಮುಂದಿನ ದಿನಗಳಲ್ಲಿ ಮೇಯರ್ ಹಾಗೂ ಆಯುಕ್ತರ ನಿಜ ಬಣ್ಣವನ್ನು ಬಯಲಿಗೆ ತರಲಾಗುವುದು ಎಂದರು.
ಕಳೆದ 24 ದಿನಗಳ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ರಾಜ್ಯಪಾಲರಿಗೆ ದೂರು ರವಾನಿಸಲಾಗಿದೆ. ಇದಕ್ಕೆ ಜಗ್ಗದಿದ್ದರೆ ಮುಂದೆ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಜನಜಾಗೃತಿ ಸಂದ ಪ್ರಧಾನ ಕಾರ್ಯದರ್ಶಿ ರಾವೇಂದ್ರ ಶೆಟ್ಟಿ, ನೀರು ಸರಬರಾಜು ನೌಕರರ ಸಂದ ಮಹಾಂತೇಶ ಗೌಡರ, ಆನಂದ ಕಾಳಮ್ಮನವರ, ಭಾಗ್ಯೋದಯ, ಬಸವರಾಜ ಮುಕ್ಕಲ, ಸರೋಜಾ ನಿಂಬಕ್ಕನವರ, ಅಯ್ಯಪ್ಪಯ್ಯ ಹಿರೇಮಠ, ಮಹೇಶ ಮೇಲಿನಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net