ಬಳ್ಳಾರಿ: ನಗರದ ನಾರಾಯಣರಾವ್ ಪಾರ್ಕ್ ಹತ್ತಿರ ಎಂಎಸ್ ಪೈಪ್‌ಲೈನ್ ಸ್ಥಳಾಂತರ ಕಾರ್ಯ ಕೈಗೊಳ್ಳುತ್ತಿರುವುದರಿಂದ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ೦೭ ನೇ ವಾರ್ಡ್‌ನಿಂದ ೨೦ ನೇ ವಾರ್ಡ್‌ವರೆಗಿನ ಪ್ರದೇಶಗಳಲ್ಲಿ ಸೆ.೨೩ ರಿಂದ ಸೆ.೨೬ರವರೆಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ನಗರವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.