ನೀರು ಮಿತವಾಗಿ ಬಳಸಿ

Use water sparingly
ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ನೀರು ಬಳಕೆ ಬೀದಿ ನಾಟಕ ಪ್ರದರ್ಶನಕ್ಕೆ ಯೋಜನಾಧಿಕಾರಿ ನಾಗೇಶ ಎನ್.ಪಿ, ಚಾಲನೆ ನೀಡಿದರು. ಪ್ರಭು ಕಡಿ, ಲೀಲಾ ಭಟ್, ಶಾಂತಾ ಭಟ್, ಧರ್ಮಸ್ಥಳ ಸಂಸ್ಥೆಯ ಶ್ರೀಹರಿ ಇತರರಿದ್ದರು.
Published on

ಮುದ್ದೇಬಿಹಾಳ: ಭೂಮಿಯಲ್ಲಿ ದೊರೆತಿರುವ ಅಪರೂಪದ ವಸ್ತು ನೀರನ್ನು ವ್ಯರ್ಥಗೊಳಿಸದೆ ಮುಂದಿನ ಪೀಳಿಗೆಗೂ ದೊರೆಯುವಂತೆ ನಾವು ಮಿತವಾಗಿ ಬಳಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಾಗೇಶ ಎನ್.ಪಿ. ಹೇಳಿದರು.

ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಪಿಲೇಕೆಮ್ಮ ನಗರದ ನಿವಾಸಿಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಚನ್ನಗಿರಿ ತಾಲೂಕು ಕಗತೂರು ಶ್ರುತಿ ಸಾಂಸ್ಕೃತಿಕ ಕಲಾತಂಡದಿಂದ ಶನಿವಾರ ಹಮ್ಮಿಕೊಂಡಿದ್ದ ನೀರು ಬಳಕೆ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ವ್ಯಸನ ಬಿಡಿಸಲು ಮದ್ಯವರ್ಜನ ಶಿಬಿರ ಸಂಸ್ಥೆಯಿಂದ ಹಮ್ಮಿಕೊಳ್ಳುತ್ತಿದ್ದೇವೆ. ಕುಟುಂಬದ ಅಭಿವೃದ್ಧಿಗಾಗಿ ಸಮಾಜದಲ್ಲಿ ಪೂರಕ ವ್ಯವಸ್ಥೆಗಳು ಸಿಕ್ಕಾಗ ಸಾಮಾಜಿಕ ಬದಲಾವಣೆ ತನ್ನಿಂದ ತಾನೇ ಸಾಧ್ಯವಾಗಲಿದೆ. ಸ್ವಾಭಾವಿಕವಾಗಿ ಜನರಿಗೆ ತಲುಪುವ ಕಾರ್ಯಕ್ರಮ ಆಗಬೇಕು.ತಿಳಿಸುವ ಹಾಗೂ ಸಂದೇಶ ಮುಟ್ಟಿಸುವ ಕಾರ್ಯ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದರು.

ಬಿಜೆಪಿ ಮುಖಂಡ ಪ್ರಭು ಕಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರಾಮಾಣಿಕತೆಗೆ ಹೆಸರಾಗಿದೆ. ದುಡಿಯುವ ವರ್ಗವಾದ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯ ಕೊಟ್ಟು ಅವರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುತ್ತಿದೆ ಎಂದರು.

ಜ್ಞಾನ ಭಾರತಿ ಮಂದಿರದ ಶಿಕ್ಷಕಿಯರಾದ ಲೀಲಾ ಭಟ್, ಶಾಂತಾ ಭಟ್, ಧರ್ಮಸ್ಥಳ ಸಂಸ್ಥೆಯ ಶ್ರೀಹರಿ, ಮುಖ್ಯಶಿಕ್ಷಕ ಜಿ.ಜೆ.ಪಾದಗಟ್ಟಿ, ಮುಖ್ಯಶಿಕ್ಷಕ ರಾಮಚಂದ್ರ ಹೆಗಡೆ, ಕಲಾ ತಂಡದ ಸದಸ್ಯ ವೆಂಕಟೇಶ್ ಡಿ. ಇತರರಿದ್ದರು. ನೀರು ಬಳಕೆ ಕುರಿತು ಕಲಾ ತಂಡದವರು ಬೀದಿ ನಾಟಕ ಪ್ರದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net