ನೀರು ಬಿಡುಗಡೆಯಿಂದ ರೈತರಿಗೆ ಸಂತಸ

Viswas vidya
Published on

ಸವದತ್ತಿ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ರೈತರು, ಜನ, ಜಾನುವಾರುಗಳಿಗೆ ಸರ್ಕಾರ ನೀರು ಒದಗಿಸಿ ಮಹತ್ವದ ನಿರ್ಣಯ ತೆಗೆದುಕೊಂಡಿದ್ದು, ರೈತರಿಗೆ ಸಂತಸ ತಂದಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಜಾಕ್‌ವೆಲ್‌ನಲ್ಲಿ ರೇಣುಕಾ ಏತ ನೀರಾವರಿ ಮತ್ತು ನರಗುಂದ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಪೂಜಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಮುಂಗಾರು ವೈಫಲ್ಯದ ಕಾರಣ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಲ್ಲಿನ ರೈತರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರೇಣುಕಾ ಏತ ನೀರಾವರಿ ಕಾಲುವೆಯಿಂದ 200 ಕ್ಯೂಸೆಕ್ ಮತ್ತು ನರಗುಂದ ಶಾಖಾ ಕಾಲುವೆಯಿಂದ 750 ಕ್ಯೂಸೆಕ್ ನೀರನ್ನು 15 ದಿನಗಳ ವರೆಗೆ ಹರಿಬಿಡಲು ತೀರ್ಮಾನಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಿ ರೈತರಿಗೆ ಅನುಕೂಲವಾಗುವುದು. ಗ್ರಾಮಸ್ಥರು ಸಮರ್ಪಕವಾಗಿ ನೀರು ಬಳಸಿಕೊಳ್ಳಬೇಕು ಎಂದರು.

ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಬಸವರಾಜ ಪ್ರಭುನವರ, ಮಹಾರಾಜಗೌಡ ಪಾಟೀಲ, ಮಲ್ಲು ಜಕಾತಿ, ಫಕೀರಪ್ಪ ಗಾಜಿ, ಎಸ್.ಆರ್.ಪಾಟೀಲ, ಯಲ್ಲಪ್ಪ ಗೊರವನಕೋಳ್ಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net