ನೀರು ಪೋಲಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ

31ydg02
Published on

ಯಾದಗಿರಿ: ಹಲವು ಕಾರಣಗಳಿಂದಾಗಿ ನಶಿಸುತ್ತಿರುವ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಉಳಿಸಿ ಬೆಳೆಸುವಂಥ ವ್ಯವಸ್ಥೆ ತರುವುದು ಅವಶ್ಯವಿದೆ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ಅಭಿಪ್ರಾಯಪಟ್ಟರು.

ಗುರುವಾರ ನಗರದ ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ಮಟ್ಟದ ಜಲಾನಯನ ತಾಂತ್ರಿಕ ಸಮಿತಿ ಸಭೆಯಲ್ಲಿ ಮಾತನಾಡಿ, ಬಿದ್ದ ಮಳೆ ನೀರು ಸ್ಥಳದಲ್ಲೇ ಇಂಗುವಂತೆ ಮಾಡುವುದು ಮತ್ತು ಅನವಶ್ಯವಾಗಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ಕೃಷಿ ಹೊಂಡ, ನಾಲಾ ಬದು, ತಡೆ ಒಡ್ಡು ರಚಿಸಲು ಮುಂದಾಗಬೇಕು ಎಂದು ನಿದರ್ೇಶನ ನೀಡಿದರು.

ಇದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳಗೊಂಡು ಇಳುವರಿ ಹೆಚ್ಚಿಸಲು ಅನುಕೂಲವಾಗುತ್ತದೆ. ಹೊಲದಲ್ಲಿ ಬೆಳೆ ಬೆಳೆದರೆ ಅದರ ಹಿಂದೆ ರೈತನ ಬೆವರಿನ ಶ್ರಮ ಅಡಗಿರುತ್ತದೆ. ಹೊಲವನ್ನು ಉಳುಮೆ ಮಾಡಿ ಅಗತ್ಯಕ್ಕೆ ತಕ್ಕಂತೆ ನೀರುಣಿಸಿದಾಗ ನಂತರ ಹೊಲ ಹಸಿರಾಗಿ ಕಾಣುತ್ತದೆ. ಸುಧಾರಿತ ಬೆಳೆಗಳನ್ನು ಬೆಳೆಯುವಲ್ಲಿ ನೀರಾವರಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಇಂಥ ಬೆಳೆಗಳಿಗೆ ಹೆಚ್ಚು ನೀರು ಬೇಕಾಗುತ್ತವೆ ಮತ್ತು ಕೆಲವು ಕಡಿಮೆ ನೀರಿನಲ್ಲಿಯೂ ಉತ್ತಮ ಇಳುವರಿಯನ್ನು ನೀಡುತ್ತವೆ. ಇನ್ನೂ ಎಷ್ಟೋ ಜನರು ಮಳೆಯನ್ನೇ ಆಧರಿಸಿ ಬೆಳೆ ಬೆಳೆಯುತ್ತಾರೆ. ರೈತರು ನೀರಾವರಿಯಲ್ಲಿ ತಂತ್ರಜ್ಞಾನವನ್ನು ಬಳಸಿದರೆ, ನೀರಿನ ಉಳಿತಾಯವಾಗಿ ಉತ್ತಮ ಇಳುವರಿ ಸಿಗಲಿದೆ. ಇದರಿಂದಾಗಿ ಆದಾಯವೂ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಲಗಳಲ್ಲಿ ನೀರಿನ ಕೊರತೆಯಾಗದಂತೆ ಸಕರ್ಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಆರಂಭಿಸಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net