

ಚಿಕ್ಕಮಗಳೂರು: ಮನುಷ್ಯನ ದೇಹಕ್ಕೆ ಹೃದಯದಂತೆ ಸಮಾಜಕ್ಕೆ ಕೆರೆಗಳಾಗಿವೆ. ಹಾಗಾಗಿ ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಬಸವತತ್ವ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಕಡೂರು ತಾಲೂಕು ಅಯ್ಯನಕೆರೆ ಕೋಡಿ ಬಿದ್ದಿರುವುದರಿಂದ ಬಾಗಿನ ಸಮರ್ಪಿಸಿ ಮಾತನಾಡಿ, ಸಕಲ ಜೀವರಾಶಿಗಳಿಗೂ ನೀರು ಒದಗಿಸುವ ಕೆರೆಗಳನ್ನು ಉಳಿಸಿಕೊಳ್ಳಬೇಕು ಎಂದರು. ಕೆರೆಗಳು ದೈವದ ಸ್ವರೂಪ. ಉತ್ತಮ ಮಳೆ, ಬೆಳೆಯಾಗಿ ಬದುಕಲ್ಲಿ ಸಂಮೃದ್ಧಿ ದೊರಕಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜನತೆ ನೀರು ಹಾಗೂ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು. ಕೆರೆಯು ನೀರು ಹರಿಸಿ ತನ್ನಲ್ಲಿನ ಕಲ್ಮಶ ತೆಗೆದು ಹಾಕುವಂತೆ ಮನುಷ್ಯ ತನ್ನ ಕೆಟ್ಟತನ ತೆಗೆಯಬೇಕು ಎಂದರು.
ಫಲಾಹಾರ ಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮಿ, ಧರ್ಮಗುರುಗಳಾದ ರೆಹಮಾನ್, ರೂಬೆನ್, ಮಲ್ಲಿಕಾರ್ಜುನ, ಲೋಕೇಶ್, ಮಹಡಿ ಮನೆ ಸತೀಶ್, ಕಲ್ಮರುಡಪ್ಪ ಇದ್ದರು.