

ಯಲ್ಲಾಪುರ: ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ಹಳ್ಳ-ಕೊಳ್ಳಗಳು ತುಂಬಿ ಹರಿದು, ತೋಟ-ಗದ್ದೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗಾರ ವಡಮಾವ ಬಳಿ ಹಳ್ಳದ ನೀರು ತೋಟಕ್ಕೆ ನುಗ್ಗಿ ತೋಟ ಜಲಾವೃತವಾಯಿತು. ಯಲ್ಲಾಪುರ- ಗುಂಡ್ಕಲ್ ರಸ್ತೆ ಪಕ್ಕ ಹುಲೆಕೋಣೆ ಬಳಿ ಹಳ್ಳದ ನೀರು ಗದ್ದೆಗೆ ನುಗ್ಗಿ ಹಾನಿಯಾಗಿದೆ.