ನೀರು ನಿಲ್ಲಿಸಲು ಹೇಳಿಲ್ಲ : ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸ್ಪಷ್ಟನೆ

18cmy3
Published on

ಚಿಂತಾಮಣಿ: ಕುರುಟಹಳ್ಳಿ ಕೆರೆಯಲ್ಲಿ ಬೆಳೆದಿರುವ ಜಾಲಿ ಗಿಡಗಳನ್ನು ತೆರವು ಮಾಡಿ ನೀರು ಬಿಡಿ ಎಂದು ಹೇಳಿದ್ದೇನೆಯೇ ಹೊರತೂ ನೀರನ್ನು ನಿಲ್ಲಿಸುವಂತೆ ಎಲ್ಲೂ ಹೇಳಿಲ್ಲ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ತಾಲೂಕಿನ ದಂಡುಪಾಳ್ಯ ಕೆರೆಗೆ ಹರಿದ ಕೆಸಿವ್ಯಾಲಿ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿ, ಶಾಸಕರು ಕುರುಟಹಳ್ಳಿ ಕೆರೆಗೆ ಬರುವ ನೀರನ್ನು ನಿಲ್ಲಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ, ಹಾಗೆ ಕ್ಷುಲ್ಲಕ ರಾಜಕಾರಣ ಮಾಡುವವರು ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದರು.

ತಾಪಂ ಸದಸ್ಯ ರಾಜಣ್ಣ, ತಾಲೂಕು ಯುವ ಜನತಾ ದಳದ ಆಧ್ಯಕ್ಷ ಗೋಪಲ್ಲಿ ರಘನಾಥರೆಡ್ಡಿ, ಜಿಪಂ ಮಾಜಿ ಸದಸ್ಯ ಗುಡೇ ಶ್ರೀನಿವಾಸರೆಡ್ಡಿ, ನಗರಸಭಾ ಸದಸ್ಯ ಅಗ್ರಹಾರ ಮುರಳಿ, ಮುಖಂಡರಾದ ಜನಾರ್ಧನ್, ಅಮಾನುಲ್ಲಾ, ತನ್ವೀರ್, ಮಿಲಿಟಿರಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net