ನೀರು ತರಲು ಹೋದ ಮಹಿಳೆ ಸಾವು

crime
Published on

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ನೀರು ತರಲೆಂದು ಹೋಗಿದ್ದ ವೇಳೆ ಮಹಿಳೆ ಮೃತಪಟ್ಟಿದ್ದಾರೆ.

ಗ್ರಾಮದ ಉಪ್ಪಾರ ಬೀದಿ ನಿವಾಸಿ ಸಿದ್ದರಾಜಮ್ಮ (65) ಮೃತರು. ಬುಧವಾರ ಮಧ್ಯಾಹ್ನ ಮನೆಗೆ ನೀರು ತರಲೆಂದು ಹೋಗಿದ್ದು, ತೊಂಬೆ ನಲ್ಲಿಯ ಬಳಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ದೂರು: ಮೃತರ ಪುತ್ರ ಸುರೇಶ್ ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೀರು ತರಲು ಹೋಗಿದ್ದ ನನ್ನ ತಾಯಿ ತೊಂಬೆಯ ಬಳಿ ವಿಲವಿಲನೆ ಒದ್ದಾಡುತ್ತಿದ್ದರೆಂದು ನಿವಾಸಿಗಳು ಹೇಳಿದರು. ಬಳಿಕ ಹೋಗಿ ನೋಡುವಷ್ಟರಲ್ಲಿ ಮೃತಪಟ್ಟಿದ್ದರು. ಆದ್ದರಿಂದ ನನ್ನ ತಾಯಿ ಸಾವಿಗೆ ಕಾರಣವೇನೆಂಬುದನ್ನು ಪತ್ತೆ ಹಚ್ಚಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net