ನೀರಿಲ್ಲದೆ ಒಣಗುತ್ತಿವೆ ಗಿಡಗಳು

2
Published on


ಕೊಳ್ಳೇಗಾಲ: ಪಟ್ಟಣದ ಸೌಂದರ್ಯ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ (209)ಯ ವಿಭಜಕಗಳಲ್ಲಿ ಹೂ ಕುಂಡಗಳ ಮೂಲಕ ಬೆಳೆಸಿದ್ದ ಗಿಡಗಳು ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆೆ.
ಐದು ತಿಂಗಳ ಹಿಂದಷ್ಟೇ ನಗರಸಭೆಯ 15ನೇ ಹಣಕಾಸು ಯೋಜನೆಯಡಿ 4.5 ಲಕ್ಷ ರೂ. ವೆಚ್ಚದಲ್ಲಿ 100ಕ್ಕೂ ಹೆಚ್ಚು ಹೂವಿನ ಕುಂಡಗಳು ಹಾಗೂ ಕಾಂಕ್ರೀಟ್ ರಿಂಗ್‌ಗಳನ್ನು ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (209) ವಿಭಜಕಗಳ ಮೇಲೆ ಸಾಲಿನಲ್ಲಿ ಹಾಕಲಾಗಿದೆ. ಪ್ರವಾಸಿ ಮಂದಿರ ವೃತ್ತ, ತಾಲೂಕು ಪಂಚಾಯಿತಿ ವೃತ್ತದಲ್ಲಿ ಕಾಂಕ್ರೀಟ್ ರಿಂಗ್ ಇಡಲಾಗಿದೆ.
ಪ್ರಾರಂಭದಲ್ಲಿ ನಗರಸಭೆಯು ವಾರಕ್ಕೆ ಮೂರು ಬಾರಿ ಗಿಡಗಳಿಗೆ ನೀರುಣಿಸುತ್ತಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡಗಳು ರಸ್ತೆಯಲ್ಲಿ ಹೋಗುವ ವಾಹನ ಸವಾರರನ್ನು ಆಕರ್ಷಿಸುತ್ತಿದ್ದವು. ಈ ಕಾರ್ಯಕ್ಕೆ ಪಟ್ಟಣದ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಆದರೀಗ ಗಿಡಗಳಿಗೆ ಸಮರ್ಪಕವಾಗಿ ನೀರು ಪೂರೈಸದ ಕಾರಣ ಹಾಗೂ ನಿರ್ವಹಣೆ ಕೊರತೆಯಿಂದ ಒಣಗುತ್ತಿವೆ. ಗಿಡದ ಸುತ್ತಲೂ ಕಳೆ ಗಿಡಗಳು ಬೆಳೆದು ನಿಂತಿವೆ. ಸರ್ಕಾರದ ಹಣ ವ್ಯಯಿಸಿ ಯೋಜನೆಯನ್ನು ಅನುಷ್ಠಾನ ಮಾಡುವಾಗಿರುವ ಕಾಳಜಿ, ನಂತರ ಅದರ ನಿರ್ವಹಣೆಯಲ್ಲಿ ಏಕೆ ಇರುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಹೂವಿನ ಕುಂಡ ಜಖಂ: ಪಟ್ಟಣದ ವಾತಾವರಣವನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಹೂಕುಂಡಗಳಲ್ಲಿ ಗಿಡಗಳನ್ನು ಬೆಳೆಸಿದರೆ, ಕೆಲವು ಕಿಡಿಗೇಡಿಗಳು ವಿಭಜಕದ ಮೇಲಿರುವ ಹೂ ಕುಂಡಗಳನ್ನು ಒಡೆದು ಹಾಕುವ ದುಷ್ಕೃತ್ಯವೆಸಗುತ್ತಿದ್ದಾರೆ. ಕೆಲವು ಗಿಡಗಳಿಗೆ ವೇಸ್ಟ್ ಆಯಿಲ್ ಸುರಿದಿದ್ದಾರೆ. ಮತ್ತೆ ಕೆಲವರು ಗಿಡಗಳನ್ನೇ ಕಸಿದು ಹೋಗುತ್ತಿದ್ದಾರೆ ಎಂದು ನಗರಸಭೆ ಸಹಾಯಕ ಪರಿಸರ ಅಭಿಯಂತರ ಪ್ರಸನ್ನ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net