ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

WhatsApp Image 2022-10-08 at 6.37.52 PM
Published on

ಶ್ರವಣಬೆಳಗೊಳ: ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಶ್ರವಣಬೆಳಗೊಳ ಹೋಬಳಿ ಸಾಣೆನಹಳ್ಳಿ ಗ್ರಾಮದ ಸುಧಾಕರ್ ಎಂಬುವವರ ಮಗ ಆಕಾಶ್ (13 ವರ್ಷ) ಹಾಗೂ ಶ್ರೀನಿವಾಸ್ ಎಂಬುವವರ ಮಗ ಲೋಕೇಶ್ (13 ವರ್ಷ) ಮೃತ ದುರ್ದೈವಿಗಳು. ಇಬ್ಬರೂ ಶ್ರವಣಬೆಳಗೊಳ ಸರ್ಕಾರಿ ಮಾದ್ಯಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.

ಶಾಲೆಗೆ ದಸರೆ ರಜೆ ಇದ್ದ ಕಾರಣ ಶನಿವಾರ ಮದ್ಯಾಹ್ನ ಮುವ್ವರು ಸ್ನೇಹಿತರು ಮಂಜುನಾಥಪುರ ಗ್ರಾಮದ ಸಮೀಪದ ಕಟ್ಟೆಯೊಂದರಲ್ಲಿ ಈಜಲು ತೆರಳಿದ್ದರು. ಆದರೆ ನೀರಿನಲ್ಲಿ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ. ಒಬ್ಬ ಬಾಲಕ ಪಾರಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net