

ಕಲಬುರಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಯುನಿಸೆಫ್ ಸಂಸ್ಥೆಯಿಂದ ಸೆ.೪ರಂದು ಬೆಳಗ್ಗೆ ೧೧ಕ್ಕೆ ನಗರದ ಸರ್ಕಾರಿ ಐಟಿಐ ತರಬೇತಿ ಸಂಸ್ಥೆ ಮೈದಾನದಲ್ಲಿ ನೀರಿನ ಸಂರಕ್ಷಣೆಗಾಗಿ ಯುವ ಜನತೆ ಕಾರ್ಯೋನ್ಮುಖತೆ, ಜನಜಾಗೃತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳಿಗೆ ಚಾಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ತಿಳಿಸಿದರು.
ನೀರು ಉಳಿಸಿ ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯ ೧೪ ಜಿ¯್ಲÉಗಳಲ್ಲಿ ಹಮ್ಮಿಕೊಂಡಿರುತ್ತದೆ. ಈ ೧೪ ಜಿ¯್ಲÉಗಳಲ್ಲಿ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ ಮತ್ತು ವಿಜಯಪುರ ಜಿ¯್ಲÉಗಳು ಒಳಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸಲಿದ್ದು, ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ. ಸಮಿತಿಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಲಿz್ದÁರೆ. ಯೋಜನೆಗಳ ವಿವಿಧ ಸೌಲಭ್ಯಗಳನ್ನು ಮಹಾಪೌರ ಯಲ್ಲಪ್ಪ ನಾಯ್ಕೋಡಿ ವಿತರಿಸಲಿದ್ದಾರೆ. ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ. ಸಿ.ಎನ್.ಬಾಬಳಾಂವಕರ್, ಜಯಂತ ಪೂಜಾರಿ, ನರಸಮ್ಮ ಅವಂಟಿ, ಮಾಲತಿ ರೇಷ್ಮಿ, ಸೂರ್ಯಕಾಂತ, ಗಣಪತಿ ಮಾಳಂಜಿ, ಕಲ್ಲನಗೌಡ ಇತರರಿದ್ದರು.