ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದ ಪಾಲಿಕೆ

water board
Published on

ಕಲಬುರಗಿ: ಭೀಮಾ ನದಿಯ ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಬ್ಲೀಚಿಂಗ್ ಫೌಡರ್, ಪಿಎಸಿ, ಆಲಂ ಕೆಮಿಕಲ್ ಬಳಕೆಯಿಂದ ನಗರದ ಆಳಂದ ರಸ್ತೆಯಲ್ಲಿನ ಫಿಲ್ಡರ್ ಬೆಡ್‌ನ ಟ್ಯಾಂಕರ್‌ಗಳಲ್ಲಿ ಹೆಚ್ಚಿನ ಕೊಳಚೆ ಸಂಗ್ರಹವಾಗಿ, ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ಎಲ್ಲ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ, ಶುದ್ಧ ನೀರು ಸರಬರಾಜು ಆಗಲಿವೆ.
ಮಳೆ ಕೊರತೆ ಹಿನ್ನೆಲೆಯಲ್ಲಿ ಡಿಸೆಂಬರ್‌ನಿAದಲೇ ಭೀಮಾ ನದಿ ತಳಮಟ್ಟಕ್ಕೆ ಹೋಗಿದ್ದು, ತಳಮಟ್ಟದ ಪಾಚಿ ಗಟ್ಟಿದ ನೀರು ಫಿಲ್ಟರ್ ಬೆಡ್ ಬರುತ್ತಿದ್ದರಿಂದ ಹೆಚ್ಚಿನ ರಸಾಯನಿಕ ಬಳಸಿ ಶುದ್ಧ ಮಾಡಲಾಗುತ್ತಿತ್ತು. ಇದರಿಂದ ೩೦ ಅಡಿಯ ಟ್ಯಾಂಕ್‌ನಲ್ಲಿ ೨೦ ಅಡಿ ಕೆಮಿಕಲ್‌ನ ಕೆಸರು ಸಂಗ್ರಹವಾಗಿತ್ತು.
ಆರು ತಿಂಗಳಿAದ ಟ್ಯಾಂಕ್ ಸ್ವಚ್ಛಗೊಳಿಸಿರಲಿಲ್ಲ. ಸ್ವಚ್ಛಗೊಳಿಸಲು ಸುಮಾರು ೮ ದಿನ ನೀರು ಸರಬರಾಜು ಬಂದ್ ಮಾಡಬೇಕಿತ್ತು. ಇದೀಗ ಮೂರು ದಿನ ಸ್ವಚ್ಛಗೊಳಿಸಿದ್ದು, ಶುದ್ಧ ನೀರು ಬರಲಿವೆ.
ನೀರು ಸರಬರಾಜು ವೇಳೆ ವಾಟರ್‌ಮನ್‌ಗಳು ಸರಿಯಾಗಿ ನೀರು ವಾರ್ಡ್ಗಳಿಗೆ ಸರಬರಾಜು ಮಾಡುವ ಕುರಿತು ಎಲ್ ಆ್ಯಂಡ್ ಟಿಯ ಎಂಟು ಇಂಜಿನಿಯರ್‌ಗಳು ನಿರ್ವಹಣೆ ಮಾಡಲಿದ್ದಾರೆ. ಇದರಿಂದ ಪ್ರತಿ ವಾರ್ಡ್ಗೆ ಪ್ರತಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net