ನೀರಿಗಾಗಿ ಖಾಲಿ ಕೊಡ ಪ್ರದರ್ಶನ

22mul1
Published on

ಮುಳಗುಂದ: ಪಟ್ಟಣದ 14ನೇ ವಾರ್ಡ್​ನ ಸಾರ್ವಜನಿಕರು ನಲ್ಲಿಯಲ್ಲಿ ನೀರು ಬರುತ್ತಿಲ್ಲ ಎಂದು ಆರೋಪಿಸಿ ಪಪಂ ಕಾರ್ಯಾಲಯದ ಎದುರು ಖಾಲಿ ಕೊಡ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದಿಂದ ಸರಿಯಾಗಿ ನೀರು ಬರುತ್ತಿಲ್ಲ. ಕೆಲವರು ನೇರವಾಗಿ ನಲ್ಲಿಗಳಿಗೆ ನೀರೆತ್ತುವ ಮೋಟಾರ್ ಬಳಸುತ್ತಿರುವುದರಿಂದ ಬೇರೆ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಕುರಿತು ಹಲವು ಬಾರಿ ಮುಖ್ಯಾಧಿಕಾರಿಗೆ ಮೌಖಿಕವಾಗಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಮೋಟಾರ್ ಬಳಸುವವರ ವಿರುದ್ಧ ಕ್ರಮ ಕೈಗೊಂಡು ಸರಿಯಾಗಿ ನೀರು ಬಿಡಬೇಕು ಎಂದು ಪಪಂ ಎದುರು ಕಾಲಿ ಕೊಡಗಳ ಪ್ರದರ್ಶನ ನಡೆಸಿದರು.

ಮಲ್ಲಪ್ಪ ಕುಂದಗೋಳ, ಲಕ್ಷ್ಮವ್ವ ಕೆಂಚನಾಯ್ಕರ, ಗಿರಿಜವ್ವ ಸೊಟೂರು, ನಿಂಗವ್ವ ನೀಲಗುಂದ, ನೀಲಗಂಗವ್ವ ಕೆಂಚನಾಯ್ಕರ, ತಿಪ್ಪವ್ವ ಕುಂದಗೋಳ, ಮಹಾಂತಪ್ಪ ಹರ್ತಿ, ಮೈಲಾರಪ್ಪ ಕೆಂಚನಾಯ್ಕರ, ಸುಲೋಚನಾ ಸೌಳಬಾವಿ ಇತರರು ಭಾಗವಹಿಸಿದ್ದರು.

ಹದಿನೈದು ದಿನಗಳಲ್ಲಿ ಈ ವಾರ್ಡ್​ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಸರಿಯಾಗಿ ನೀರು ಬರುವಂತೆ ಹಾಗೂ ನೀರೆತ್ತುವ ಯಂತ್ರವನ್ನು ಯಾರೂ ಬಳಸದಂತೆ ಕ್ರಮ ಜರುಗಿಸುತ್ತೇವೆ. | ಎಂ.ಎಸ್. ಬೆಂತೂರ, ಮುಖ್ಯಾಧಿಕಾರಿಗಳು ಪಪಂ ಮುಳಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net