ನೀರಾವರಿ ಸಮರ್ಪಕ ಅನುಷ್ಠಾನ ಆಗಲಿ

Dayanand Patil
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಗೆ ಬಂದಿದ್ದು, ಅವುಗಳು ಸಮರ್ಪಕ ಅನುಷ್ಠಾನ ಆಗದೆ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ, ೩೭೧ (ಜೆ) ಅನುಷ್ಠಾನವೂ ಸರಿಯಾಗಿ ಆಗದೆ ಇರುವುದರಿಂದ ಸಚಿವ ಸಂಪುಟ ಈ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ಹೇಳಿದರು. ಬೃಹತ್ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿದರೂ ಸ್ಪಂದನೆ ದೊರೆಯುತ್ತಿಲ್ಲ. ನಗರಕ್ಕೆ ಕೊಳಚೆ ನೀರು ಪೂರೈಕೆ ಆಗುತ್ತಿದೆ. ನೀರಾವರಿ ಯೋಜನೆಗಳ ನಿಟ್ಟಿನಲ್ಲಿ ಸರ್ಕಾರ ಸಚಿವ ಸಂಪುಟದಲ್ಲಿ ವಿಶೇಷ ಆದ್ಯತೆ ವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳದ ಸಚಿವ ಸಂಪುಟ ವ್ಯರ್ಥವಿದ್ದಂತೆ. ನೀರಾವರಿ, ೩೭೧ (ಜೆ) ಸಮರ್ಪಕ ಅನುಷ್ಠಾನಕ್ಕೆ ಸಚಿವ ಸಂಪುಟ ಧ್ವನಿ ಎತ್ತಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಒದಗಿಸಬೇಕು, ಕಾಫಿ ಬೋರ್ಡ್ನಂತೆ ತೊಗರಿ ಬೋರ್ಡ್ ನಿರ್ಮಿಸಬೇಕು, ದಾಲ್ ಕ್ರಿಸ್ಟಲ್ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಅಂಬಾರಾಯ ಬೆಳಕೋಟಾ, ಸುನೀಲ ಇನಾಂದಾರ, ಲಕ್ಷಿö್ಮÃಕಾಂತ ಬಬಲಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net