ನೀರಸಾಗರ ಭರ್ತಿಗೆ 4 ಅಡಿ ಬಾಕಿ

h6- Neerasagar 1
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಮಲೆನಾಡು ಪ್ರದೇಶ ಕಲಘಟಗಿ ತಾಲೂಕಿನಲ್ಲಿ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹುಬ್ಬಳ್ಳಿಯ ಭಾಗಶಃ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯ ನಿಧಾನಕ್ಕೆ ಭರ್ತಿಯಾಗುತ್ತಿದೆ.

ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಭರ್ತಿಗೆ ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ. ನೀರಸಾಗರ ಜಲಾಶಯದ ಗರಿಷ್ಠ ಮಟ್ಟ 38 ಅಡಿ ಇದ್ದು, ಸದ್ಯ 34 ಅಡಿ ಭರ್ತಿಯಾಗಿದೆ. ಕಳೆದ ನಾಲ್ಕು ದಿನದಲ್ಲಿ ಐದು ಅಡಿ ನೀರು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯ ಭರ್ತಿಯಾದರೆ 0.9 ಟಿಎಂಸಿ ಅಡಿ (29,000 ಮಿಲಿಯನ್ ಲೀಟರ್) ನೀರು ಸಂಗ್ರಹವಾಗಲಿದೆ. ಇದನ್ನು ಹುಬ್ಬಳ್ಳಿಯ ಭಾಗಶಃ ಪ್ರದೇಶಕ್ಕೆ ಎರಡು ವರ್ಷ ಪೂರೈಸಬಹುದು ಎಂದು ಜಲಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ (ಹೆಚ್ಚುವರಿ) ಪಿ. ಸುರೇಶ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net