ನೀರನ್ನು ಮಿತವಾಗಿ ಬಳಸಿ

HYR GNAGA 13 (1)
Published on

ಹಿರಿಯೂರು: ಅಮೂಲ್ಯ ನಿಸರ್ಗದತ್ತ ಸಂಪನ್ಮೂಲ ನೀರನ್ನು ಮಿತವಾಗಿ ಬಳಸಿ-ಉಳಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದರು.

ನಗರದ 14ನೇ ವಾರ್ಡ್-ಕುಂಬಾರ ಬೀದಿಯಲ್ಲಿ ಸಂಸ್ಥೆ ವತಿಯಿಂದ ಶುದ್ಧ-ಗಂಗಾ ಕುಡಿವ ನೀರಿನ ಘಟಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ರಾಜ್ಯದ ವಿವಿಧೆಡೆ 459 ಶುದ್ಧ-ಗಂಗಾ ಕುಡಿವ ನೀರಿನ ಘಟಕ ಸ್ಥಾಪಿಸಿದ್ದು, ಜೀವಜಲ ಮಿತ ಬಳಕೆಯತ್ತ ಎಲ್ಲರೂ ಚಿತ್ತ ಹರಿಸಬೇಕು ಎಂದರು.

ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್, ಮಾಜಿ ಅಧ್ಯಕ್ಷೆ ಗೀತಾ, ಸದಸ್ಯ ಜಗದೀಶ್, ಶಿರಸ್ತೇದಾರ್ ತಿಪ್ಪೇಸ್ವಾಮಿ, ವಿನಯ್‌ಕುಮಾರ್, ರಘು, ಸತೀಶ್, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net