ನೀತಿಯಿಲ್ಲದ ಶಿಕ್ಷಣದಿಂದ ಅಶಾಂತಿ - ವೀರಭದ್ರ ಶ್ರೀ

04
Published on


ಕಟಕೋಳ: ಭೀತಿ ಇಲ್ಲದ ಶಾಸನ, ನೀತಿ ಇಲ್ಲದ ಶಿಕ್ಷಣ, ನೆಮ್ಮದಿ ಇಲ್ಲದ ಜೀವನದಿಂದ ಸಮಾಜದಲ್ಲಿ ಅಶಾಂತಿ ಹಾಗೂ ಅನಾಗರಿಕತೆ ಅನಾವರಣಗೊಳ್ಳುತ್ತಿದೆ ಎಂದು ಕಟಕೋಳ-ಎಂ.ಚಂದರಗಿ ಹಿರೇಮಠದ ವೀರಭದ್ರ ಶ್ರೀಗಳು ಹೇಳಿದರು.

ಸಮೀಪದ ಎಂ. ಚಂದರಗಿಯ ಹಿರೇಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಗಡದೇಶ್ವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುವಿನ ಮೇಲೆ ಶ್ರದ್ಧೆ ಮತ್ತು ಭಕ್ತಿ ಇದ್ದರೆ ಜೀವನದಲ್ಲಿ ಎಂತಹ ಕಷ್ಟ ಬಂದರೂ ಪರಿಹಾರವಾಗುತ್ತವೆ ಎಂದರು.

ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶ್ರೀಗಳು ಮಾತನಾಡಿ, ಜೀವನದಲ್ಲಿ ಸಮಾಧಾನ ಇದ್ದರೆ ಶಾಂತಿ ತಾನಾಗಿಯೇ ಲಭಿಸುವುದು ಎಂದರು. ಉಪನ್ಯಾಸಕಿ ನೇತ್ರಾವತಿ ಹಿರೇಮಠ ಹಾಗೂ ದೀಪಾ ಗುರುನಗೌಡ್ರ ಉಪನ್ಯಾಸ ನೀಡಿದರು.

ರೇಣುಕ ಗಡದೇಶ್ವರ ದೇವರು, ರುದ್ರಮುನಿ ದೇವರು, ರೇವಣಸಿದ್ದ ದೇವರು, ಟಿ.ಪಿ ಮನ್ನೂಳಿ, ಸಿ.ಎ.ದೇಸಾಯಿ, ಎ.ಸಿ.ಸುರಗ, ಸಂಗಯ್ಯ ಹಿರೇಮಠ, ಚನಬಸಪ್ಪ ಮುತ್ಯಾ ಇದ್ದರು. ಶಿಕ್ಷಕ ಎಂ.ಎಸ್. ಹಗೇದಾಳ ನಿರೂಪಿಸಿದರು. ವಿ.ಎಸ್. ಜಂಗಣ್ಣವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net