ನೀತಿ ಕಥೆ-ಕವನ ರಚನೆಗೆ ಅವಕಾಶ

story
Published on


ಕೊಪ್ಪಳ: ಶೌಚಗೃಹ ಬಳಕೆ, ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸಲು ನೀತಿ ಕಥೆ ಮತ್ತು ಕವನಗಳನ್ನು ರಚಿಸಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.


ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಿದ ವೈಯಕ್ತಿಕ ಶೌಚಗೃಹ ಬಳಕೆ, ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡುವ ದೃಷ್ಠಿಯಿಂದ ಶಾಲಾ ಹಾಗೂ ಅಂಗನವಾಡಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ನೀತಿ ಕಥೆ ಮತ್ತು ಕವನಗಳನ್ನೊಳಗೊಂಡ ಪುಸ್ತಕವನ್ನು ಸಿದ್ದಪಡಿಸಲಾಗುತ್ತಿದೆ. ಸಾರ್ವಜನಿಕರು ನೀತಿ ಕಥೆ ಮತ್ತು ಕವನಗಳನ್ನು (200 ರಿಂದ 250 ಪದಗಳ ಮಿತಿಯಲ್ಲಿ) ಸಿದ್ಧ್ದಪಡಿಸಿ, 9980128210, 9481085235, 8971363678 ಸಂಖ್ಯೆಗಳಿಗೆ ಜು.31ರ ಸಂಜೆ 5.30ರೊಳಗೆ ಕಳಿಸುವಂತೆ ಡಿಡಿಪಿಐ ಎಂ.ಎ.ರಡ್ಡೇರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net