

ಕಲಬುರಗಿ: ಒಬ್ಬ ಲೇಖಕ, ಕವಿ ಬರೆದಂತೆ ಬದುಕಲು ಸಾಧ್ಯವೇ? ಬರಹವೇ ಬೇರೆ, ಬದುಕೇ ಬೇರೆ ಯಾಕಿರಬಾರದು? ಬದುಕು ಬೇರೆಯz್ದೆÃ ಆಗಿದ್ದು, ಚಿಂತನೆಗಳ ಆಶಯವೇ ಬೇರೆ ಇರಬಾರದೆ ಎಂಬ ಪ್ರಶ್ನೆ ಇಂದು ಎದುರಾಗಿದೆ. ಆದ್ದರಿಂದ ಜೀವನ ನೀತಿ ಮತ್ತು ಆದರ್ಶ ಸಾಹಿತ್ಯ ರಚನೆ ಮುಖ್ಯ ಎಂದು ಚಾಮರಾಜನಗರದ ಹಿರಿಯ ಸಾಹಿತಿ ಮಹಾದೇವ ಶಂಕನಪುರ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದ ಎಸ್‌ಸಿ-ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕಲಬುರಗಿ ಸಮುದಾಯದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಲಕ್ಕೂರು ಆನಂದ ನೆನಪು ಹಾಗೂ ಸಮಾಕಾಲೀನ ಸಾಮಾಜಿಕ ಹೊಣೆಗಾರಿಕೆ-ಚಿಂತನೆ ಮತ್ತು ಲಕ್ಕೂರು ಆನಂದರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕವಿ ಲಕ್ಕೂರು ಆನಂದ ಸಾಹಿತ್ಯ ಚಿಂತನೆ ಕರಗತ ಮಾಡಿಕೊಂಡಿದ್ದರು, ಅವರು ರಚಿಸಿದ ಸಾಹಿತ್ಯ, ಕಾವ್ಯ ರಚನೆ, ತೆಲುಗು, ಕನ್ನಡ ಸಾಹಿತ್ಯ ಅನುವಾದ ಪ್ರಾವೀಣ್ಯತೆಯಿಂದ ಕನ್ನಡ ಮತ್ತು ತೆಲುಗು ಸಾಹಿತ್ಯ ಲೋಕ ಶ್ರೀಮಂತವಾಗಿದೆ. ಕಾವ್ಯ ನೆಲೆ, ಮಾದರಿ, ರಚನೆಯ ವಿದ್ವತ್ತು ಮತ್ತು ಪ್ರೇರಣೆ ನಿಗೂಢ ಎಂದರು.
ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ಸಮ ಸಮಾಜದ ಚಿಂತನೆ ಬೆಳೆಸಿಕೊಂಡಿದ್ದ ಕವಿ ಲಕ್ಕೂರು ಆನಂದ ಅಪ್ರತಿಮ ಸಾಹಿತ್ಯ ಪ್ರತಿಭೆ. ಸಾಹಿತ್ಯ ಮತ್ತು ಕಾವ್ಯ ಚಿಂತನೆಗಳನ್ನು ಬಿತ್ತಿ ಬೆಳಕು ನೀಡಿದ್ದಾರೆ. ಅತ್ಯುತ್ತಮ ವೈಚಾರಿಕ ಜ್ಞಾನ ಮತ್ತು ವಿಭಿನ್ನ ಆಲೋಚನೆ ಕ್ರಮ ಮೈಗೂಡಿಸಿಕೊಂಡಿದ್ದರು ಎಂದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಯುವ ಸಾಹಿತ್ಯ ಪ್ರಶಸ್ತಿ ಪಡೆದಂತ ಲಕ್ಕೂರು ಆನಂದ ಅವರಂತ ಪ್ರತಿಭೆಗಳಿಗೆ ಅವಕಾಶ, ಉದ್ಯೋಗ ದೊರೆಯುತ್ತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಅವಕಾಶದಿಂದ ಅಧಿಕಾರ, ಉದ್ಯೋಗ ಪಡೆದವರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ, ವಿದ್ಯಾವಂತರು ಉತ್ತಮ ಸಮಾಜ ಕಟ್ಟುವ ಕೆಲಸ ಮಾಡಬೇಕು. ಸನ್ಮಾರ್ಗ ತೋರಬೇಕಿರುವವರು ಸುಮ್ಮನಿರುವುದು ಸರಿಯಲ್ಲ ಎಂದರು.
ಸಾಹಿತಿ ಪ್ರೊ.ಆರ್.ಕೆ.ಹುಡುಗಿ ಮಾತನಾಡಿ, ಯುವಕರು ವ್ಯಸನಗಳಿಗೆ ಬಲಿಯಾಗದೇ ಆದರ್ಶ ಗುಣ ಪಾಲಿಸಬೇಕು. ಯುವ ವಿದ್ಯಾವಂತ ಸಮುದಾಯ ಹಾಳಾಗುತ್ತಿರುವುದು ನೋಡದೆ, ಅವರಲ್ಲಿ ಸಕಾರಾತ್ಮಕ ಗುಣ ಬೆಳೆಸಬೇಕು ಎಂದರು.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಅಪ್ಪಗೆರೆ ಸೋಮಶೇಖರ ಪ್ರಾಸ್ತಾವಿಕ ಮಾತನಾಡಿದರು. ಆನಂದ ಅವರ ತಾಯಿ ಮುನಿಯಮ್ಮ ಲಕ್ಕೂರು, ಸಹೋದರ ನಾಗರಾಜ ಲಕ್ಕೂರು, ಅರ್ಜುನ್ ಭದ್ರೆ ಇತರರಿದ್ದರು. ಡಾ.ಸಂತೋಷಕAಬಾರ ಸ್ವಾಗತಿಸಿದರು. ಅಣವೀರಗೌಡ ಬಿರಾದಾರ ನಿರೂಪಣೆ ಮಾಡಿದರು. ಭೀಮಾಬಾಯಿ ವಂದಿಸಿದರು.