ನೀಟ್‌ನಲ್ಲಿ ಎಸ್‌ಆರ್‌ಎಸ್ ವಿದ್ಯಾರ್ಥಿಗಳ ಸಾಧನೆ

CTD 14 SRS NEET-03
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು 2023ರ ನೀಟ್-ಮೆಡಿಕಲ್ ಫಲಿತಾಂಶದಲ್ಲಿ ಆಲ್‌ಇಂಡಿಯಾ ಮಟ್ಟ ದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ನೀಟ್‌ನಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾ ರ್ಥಿಗಳನ್ನು ಗೌರವಿಸಿ ಮಾತನಾಡಿದ ಎಸ್‌ಆರ್‌ಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರು,ವಿದ್ಯಾರ್ಥಿ ಎನ್.ಮರುಳ ಸಿದ್ದನಗೌಡ 676 ಅಂಕಗಳೊಂದಿಗೆ ಸುತ್ತ-ಮುತ್ತಲಿನ 8 ಜಿಲ್ಲೆಗಳಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಚಿನ್ಮಯ್ ಎಂ.ಗೌಡ 663 ಹಾಗೂ ಕೆ.ಎಂ.ಮಧುಸೂದನ್ ಅವರು 660 ಅಂಕಗಳಿಸುವುದರೊಂದಿಗೆ ಚಿತ್ರದುರ್ಗ ಹಾಗೂ ಅಕ್ಕ- ಪಕ್ಕದ ಜಿಲ್ಲೆಗಳ ವೈದ್ಯಕೀಯ ಅಧ್ಯಯನ ಆಕಾಂಕ್ಷೆಯನ್ನು ಹೊಂದಿರುವ ವಿದ್ಯಾರ್ಥಿಗಳು ಎಸ್‌ಆರ್‌ಎಸ್‌ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚಿತ್ರದುರ್ಗದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ. ವಿ.ನಿತಿನ್,ಡಿ.ಯಶಸ್ ಹಾಗೂ ಟಿ.ಆಯುಸ್ ಕ್ರಮವಾಗಿ ಆಲ್‌ಇಂಡಿಯಾ 332,371 ಹಾಗೂ 381ನೇ ರ‌್ಯಾಂಕ್‌ಗಳಿಸಿರುವುದರೊಂದಿಗೆ ಉತ್ತಮ ದಾಖಲೆ ಮಾಡಿದ್ದಾರೆ.

ಮರುಳಸಿದ್ದನಗೌಡ,ಮಧುಸೂಧನ್ ಕಾಲೇಜಿನ ಹಾಸ್ಟೆಲ್ ಹಾಗೂ ಚಿನ್ಮಯ್ ಎಂ.ಗೌಡ ಹೆರಿಟೇಜ್ ಶಾಲೆ ವಿದ್ಯಾರ್ಥಿಗಳೆಂಬುದು ವಿಶೇಷ. ಉಳಿದವರಲ್ಲಿ 27ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ಕಾರ‌್ಯದರ್ಶಿ ಸುಜಾತ ಲಿಂಗಾರೆಡ್ಡಿ ಅವರು ಮಾತನಾಡಿ,ಉತ್ತೀರ್ಣರಾದ ಈ ಎಲ್ಲ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲೇ ರಾಜ್ಯ,ರಾಷ್ಟ್ರ ದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಐವರಿಗೆ ಖಂಡಿತಾ ಎಐಎಂಎಸ್‌ನಲ್ಲಿ ಕಾಲೇಜಿನಲ್ಲಿ ಪ್ರವೇಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ 27 ವಿದ್ಯಾರ್ಥಿಗಳೊಂದಿಗೆ 18 ವಿದ್ಯಾರ್ಥಿಗಳು 450 ಕ್ಕೂ ಹೆಚ್ಚು ಅಂಕಗಳಿಸಿ ವಿವಿಧ ಮೀಸಲುಗಳಡಿ ವೈದ್ಯಕೀಯ ಸೀಟು ಪಡೆಯಲಿದ್ದು,ನಮ್ಮ ಈ ಕಾಲೇಜಿನ 45 ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ ಇತರೆ 22ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಯುರ್ವೆದ ಹಾಗೂ ಇತರೇ ಭಾರತೀಯ ವೈದ್ಯಕೀಯ ಪದ್ಧತಿಗಳ ಅಧ್ಯಯನಕ್ಕೆ ಪ್ರವೇಶ ಪಡೆಯಲು ಶಕ್ತರಾಗಿದ್ದಾರೆ ಎಂದರು.

ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಮಾತನಾಡಿ ಕಾಲೇಜು ಆರಂಭವಾದ 2009ರಿಂದ ಸಿಇಟಿ,ನೀಟ್ ಹಾಗೂ ಜೆಇಇನಲ್ಲಿ ನಮ್ಮ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಮೆಡಿಕಲ್ ಆಕಾಂಕ್ಷಿಗಳಿಗಾಗಿಯೇ ನೀಟ್-ಮೆಡಿಕಲ್ ಸ್ಟಾರ್ ಬ್ಯಾಚ್ ಆರಂಭಿಸಿ ಸತತ ತರಬೇತಿ ನೀಡಲಾಗುತ್ತಿದೆ.
ಟಾರ್ಗೆಟ್ ಟೆಸ್ಟ್,ಸಮಾಲೋಚನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸಲಾಗುತ್ತಿದೆ.ದೇಶದ ವಿವಿಧ ಭಾಗಗಳ ಪರಿ ಣತ ವಿಷಯ ತಜ್ಞರು ತರಬೇತಿ ನೀಡುತ್ತಿರುವ ಕರ್ನಾಟಕದ ಏಕೈಕ ಸಂಸ್ಥೆಯಾಗಿದೆ ಎಂದರು. ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ್,ಪ್ರಾಚಾರ‌್ಯ ಇ.ಗಂಗಾಧರ್,ಬೋಧಕ,ಬೋಧಕೇತರ ಸಿಬ್ಬಂದಿ ಇದ್ದರು.

ಹೃದೋಗ ತಜ್ಞನಾಗುವೆ
ಉಪನ್ಯಾಸಕರ ಶ್ರಮ ನಮ್ಮ ಈ ಸಾಧನೆಗೆ ಕಾರಣವಾಗಿದೆ. ನಾವೂ ಎಷ್ಟೇ ಹಾರ್ಡ್ ವರ್ಕ್ ಮಾಡಿದ್ದರೂ ಉಪನ್ಯಾಸಕರ ಮಾರ್ಗ ದ ರ್ಶನದ ಅಗತ್ಯವಿದ್ದೇ ಇರುತ್ತದೆ. ಸಮಯ ವ್ಯರ್ಥಕ್ಕೆ ಅವಕಾಶವಿರಲಿಲ್ಲ. ಪ್ರತಿಯೊಂದು ಕ್ಲಾಸ್ ಕೂಡ ಉಪಯುಕ್ತವಾಗಿತ್ತು. ಪಾಲಕರ ಬೆಂಬಲವೂ ಕಾರಣವಾಯಿತು. ಎಂಬಿಬಿಎಸ್ ಬಳಿಕ ಹೃದ್ರೋಗ ತಜ್ಞನಾಗುವ ಬಯಕೆ ಇದೆ.
ಎನ್.ಮರುಳ ಸಿದ್ದನಗೌಡ, ವಿದ್ಯಾರ್ಥಿ.

ಕಾರ್ಡಿಯಾಲಿಜಿಸ್ಟ್ ಆಗುತ್ತೇನೆ
ಉಪನ್ಯಾಸಕರು ಹಾಗೂ ಪಾಲಕರ ಬೆಂಬಲದಿಂದ ನಾನು ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿದೆ. ಟೀಮ್ ವರ್ಕ್ ನಿಂದಾಗಿ ತುಂಬಾನೇ ಹೆಲ್ಫ್ ಆಗಿದೆ. ನನಗೂ ಕಾರ್ಡಿಲಾಜಿಸ್ಟ್ ಆಗುವ ಹೆಬ್ಬಯಕೆ ಇದೆ.
ಚಿನ್ಮಯ ಎಂ.ಗೌಡ,ವಿದ್ಯಾರ್ಥಿ.

ಐಎಎಸ್ ಇಚ್ಛೆ ಇದೆ
ಈ ಫಲಿತಾಂಶದಿಂದ ತುಂಬಾನೇ ಖುಷಿಯಾಗಿದೆ. ಉಪನ್ಯಾಸಕರು,ಪಾಲಕರ ಪ್ರೋತ್ಸಾಹದಿಂದ ಒಳ್ಳೆಯದಾಗಿದೆ. ಮೆಡಿಕಲ್ ಪದವಿ ಬಳಿಕ ಐಎಎಸ್ ಪಾಸು ಮಾಡುವ ಇಚ್ಛೆ ಇದೆ.
ಕೆ.ಎಂ.ಮಧುಸೂದನ್,ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net